Crime

ಮದ್ಯದ ಅಮಲಿನಲ್ಲಿ ವೃದ್ಧ ದಂಪತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಇಪ್ಪತ್ತರ ಹರೆಯದ ಯುವಕ

ಲಖನೌ: ಉತ್ತರ ಪ್ರದೇಶದ ಸಂಪರ್ಕ ಕ್ರಾಂತಿ ಎಕ್ಸ್‌ ಪ್ರೆಸ್‌ ನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕ ದಂಪತಿಯ ಮೇಲೆ ಇಪ್ಪತ್ತರ ಹರೆಯದ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ.

ರೈಲು ವಿರಂಗನ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ಕಡೆಗೆ ಪ್ರಯಾಣಿಸುತ್ತಿದ್ದಾಗ, ಸಂತ್ರಸ್ತರು, ಕೆಳಗಿನ ಬರ್ತ್ ಸಂಖ್ಯೆ 57 ಮತ್ತು 60 ರಲ್ಲಿ ಮಲಗಿದ್ದರು, ಯುವಕ ಅಮಲಿನಲ್ಲಿ ವೃದ್ಧ ದಂಪತಿ ಮತ್ತು ಅವರ ಲಗೇಜ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಆರೋಪಿ ಪ್ರಯಾಣಿಕನನ್ನು ನೈಋತ್ಯ ದೆಹಲಿಯ ಕುತುಬ್ ವಿಹಾರ್‌ನ ರಿತೇಶ್ ಎಂದು ಗುರುತಿಸಲಾಗಿದೆ.

ಆನ್‌ ಬೋರ್ಡ್ ಟಿಟಿಇ ಬಸ್ರುದ್ದೀನ್ ಖಾನ್ ತಕ್ಷಣ ಕೋಚ್ ಅನ್ನು ಸ್ಯಾನಿಟೈಜ್ ಮಾಡಲು ಹೌಸ್ ಕೀಪಿಂಗ್ ಸಿಬ್ಬಂದಿ ಕರೆದರು. ನಂತರ ಅವರು ಘಟನೆಯ ಬಗ್ಗೆ ಆರ್‌ಪಿಎಫ್ ಝಾನ್ಸಿಗೆ ಮೆಮೋವನ್ನು ನೀಡಿದರು. ಮುಂದಿನ ಕಾನೂನು ಕ್ರಮಕ್ಕಾಗಿ ರಿತೇಶ್‌ ನನ್ನು ಅವರಿಗೆ ಹಸ್ತಾಂತರಿಸಿದರು.ರಿತೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗದ PRO ಮನೋಜ್ ಸಿಂಗ್ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button