
Crime
ಸಸ್ಯಾಹಾರಕ್ಕೆ ಬದಲಿಗೆ ಮಾಂಸಾಹಾರ ನೀಡಿದ ಜೊಮಾಟೊ ಕಂಪನಿ- 1 ಲಕ್ಷ ದಂಡ ವಿಧಿಸಿದ ಗ್ರಾಹಕ ಪರಿಹಾರ ವೇದಿಕೆ
ದೆಹಲಿ :ಸಸ್ಯಾಹಾರ ಆರ್ಡರ್ ಮಾಡಿದ ಗ್ರಾಹಕರೋಬ್ಬರಿಗೆ ಮಾಂಸಹಾರ ನೀಡಿದ ಜೋಧ್ಪುರದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯು ಜೊಮಾಟೊ ಮತ್ತು ಮೆಕ್ಡೊನಾಲ್ಡ್ ಕಂಪನಿಗಳಿಗೆ ಒಟ್ಟು ₹1 ಲಕ್ಷ ದಂಡ ವಿಧಿಸಿದೆ ಎಂದು ಜೊಮಾಟೊ ಶುಕ್ರವಾರ ಹೇಳಿದೆ.
ಜೋಮ್ಯಾಟೋ ಕಂಪನಿಯು ರೆಸ್ಟೋರೆಂಟ್ ನೀಡುವ ಆಹಾರವನ್ನು ಸಂಬಂಧಪಟ್ಟ ಗ್ರಾಹಕರಿಗೆ ತಲುಪಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಹೀಗಾಗಿ, ಸೇವೆಯಲ್ಲಿ ಯಾವುದೇ ರೀತಿಯ ಕೊರತೆ ಕಂಡುಬಂದರೆ, ಆರ್ಡರ್ನಲ್ಲಿ ಬದಲಾವಣೆ ಆದರೆ, ಆರ್ಡರ್ ನೀಡಿದ್ದಕ್ಕೆ ಬದಲಾಗಿ ಬೇರೆಯದನ್ನು ನೀಡಿದರೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಆಹಾರವನ್ನು ನೀಡುವ ರೆಸ್ಟೋರೆಂಟ್ ಹೊಣೆಗಾರ ಆಗಲಿದೆ ಎಂದು ಜೊಮಾಟೊ ಕಂಪನಿಯು ತಿಳಿಸಿದೆ.




