Crime
ಅಕ್ಟೋಬರ್ 3 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ.ಅ.1:- ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ದರ್ಗಾ ಫೀಡರ್ ವ್ಯಾಪ್ತಿಯಲ್ಲಿ 2020ರ ಅಕ್ಟೋಬರ್ 3 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ದರ್ಗಾ ಫೀಡರ್: ಅಕ್ಬರ್ ಶಾಲೆ, ಖಬರಸ್ತಾನ್ 1 ಆಂಡ್ 2, ಡಂಕಾ ಏರಿಯಾ, ನ್ಯಾಶನಲ್ ಚೌಕ್ ಏರಿಯಾ, ತೃಪ್ತಿ ಆಸ್ಪತ್ರೆ, ಸಂತೋಷವಾಡಿ, ಡೆಕ್ಕನ್ ಪೈಪ್, ಹೊಸ ದರ್ಗಾ ಏರಿಯಾ, ಮಂಗಲಾ ಪಾಟೀಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.




