ವಾಹನ ಚಾಲಕರನ್ನು ಪೂರೈಸಲು ನೋಂದಾಯಿತ ಏಜೆನ್ಸಿಗಳಿಂದ ಟೆಂಡರ್ ಆಹ್ವಾನ
ಕಲಬುರಗಿ.ಅ.01:- ಕಲಬುರಗಿ ಜಿಲ್ಲೆಯ ಅಬಕಾರಿ ಇಲಾಖೆಯ ವಿವಿಧ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 14 ಜನ ವಾಹನ ಚಾಲಕರ ಸೇವೆ ಆಸಕ್ತ ಹಾಗೂ ಅರ್ಹ ನೋಂದಾಯಿತ ಏಜೆನ್ಸಿಗಳಿಂದ ಇ-ಪ್ರಕ್ಯೂರ್ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಆಸಕ್ತ ಗುತ್ತಿಗೆದಾರರು ಕರ್ನಾಟಕ ಸರ್ಕಾರದ ವೆಬ್ಸೈಟ್ ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ಪೊರ್ಟಲ್ದಲ್ಲಿ ಭಾಗವಹಿಸಬೇಕು. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ 2020ರ ಅಕ್ಟೋಬರ್ 15ರ ಸಂಜೆ 4 ಗಂಟೆವರೆಗೆ ಇರುತ್ತದೆ. ತಾಂತ್ರಿಕ ಟೆಂಡರ್ನ್ನು ತೆರೆಯುವ ದಿನಾಂಕ ಅಕ್ಟೋಬರ್ 17 ರಂದು ಸಂಜೆ 4 ರವರೆಗೆ ಇರುತ್ತದೆ. ಆರ್ಥಿಕ ಟೆಂಡರ್ನ್ನು ತೆರೆಯುವ ದಿನಾಂಕ ಅಕ್ಟೋಬರ್ 19 ರಂದು ಸಂಜೆ 4 ಗಂಟೆಯವರೆಗೆ ಇರುತ್ತದೆ.
ಟೆಂಡರ್ ದಾಖಲೆಗಳನ್ನು ಮೇಲ್ಕಂಡ ವೆಬ್ಸೈಟ್ದಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಟೆಂಡರ್ ಅವಧಿ, ಇಎಂಡಿ ಮೊತ್ತ, ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿನ ಅಬಕಾರಿ ಭವನದ ಮೊದಲನೇ ಮಹಡಿಯಲ್ಲಿನ ಅಬಕಾರಿ ಉಪ ಆಯುಕ್ತರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.




