ಮಡಿಕೇರಿಯಲ್ಲಿ ಸಂವೇದನಾ ದಿನದ ಪ್ರಯುಕ್ತ ‘ಮಹಾ ರಕ್ತದಾನ ಶಿಬಿರ’

ಮಡಿಕೇರಿ ಮಾ.23 : ನ್ಯಾಷನಲ್ ಇಂಟಿಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ಸ್ ಅಂಡ್ ಆಕ್ಟಿವಿಸ್ಟ್(ನೀಫಾ).

ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನೀಮ) ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಂವೇದನಾ ದಿನದ ಅಂಗವಾಗಿ ‘ಮಹಾ ರಕ್ತದಾನ ಶಿಬಿರ’ ನಗರದಲ್ಲಿ ನಡೆಯಿತು.


ನ್ಯಾಷನಲ್ ಇಂಟಿಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ ಎಂಡ್ ಆಕ್ಟಿವಿಸ್ಟ್ಸ್ ಸಂಸ್ಥೆ(ನೀಫಾ), ರೆಡ್ ಕ್ರಾಸ್, ಬಿಜೆಪಿ ಯುವ ಮೋರ್ಚಾ, ಬಾಲಭವನ, ಫೀ.ಮಾ.ಕೆ.ಎಂ.

ಕಾರ್ಯಪ್ಪ ಕಾಲೇಜಿನ ಎನ್.ಎಸ್.ಎಸ್. ಘಟಕ ಮೊದಲಾದ ಸಂಸ್ಥೆಗಳ ಸಹ ಪ್ರಾಯೋಜಕತ್ವದಲ್ಲಿ ನಗರದ ಬಾಲಭವನದಲ್ಲಿ ನಡೆದ ಶಿಬಿರದಲ್ಲಿ ಅನೇಕರು ಪಾಲ್ಗೊಂಡು ರಕ್ತದಾನ ಮಾಡಿದರು.


ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‍ಗುರು, ಸುಖ್‍ದೇವ್ ಮತ್ತು ಅಶ್ಫಕ್ ಉಲ್ಲಾ ಖಾನ್ ಅವರ ಬಲಿದಾನದ ದಿನದ ಸ್ಮರಣೆಯಲ್ಲಿ ರಾಷ್ಟ್ರವ್ಯಾಪಿ ಇಂದು ಸುಮಾರು 1500 ಕೇಂದ್ರಗಳಲ್ಲಿ ರಕ್ತದಾನ ನಡೆದಿರುವುದು ವಿಶೇಷ.

ಮಡಿಕೇರಿಯ ರಕ್ತದಾನ ಶಿಬಿರದಲ್ಲಿ ಸ್ವಯಂ ಇಚ್ಛೆಯಿಂದ ರಕ್ತದಾನ ಮಾಡಿದವರಿಗೆ ಹುತಾತ್ಮರ ಭಾವಚಿತ್ರವನ್ನು ಹೊಂದಿದ ಪ್ರಶಂಸಾ ಪತ್ರವನ್ನು ನೀಡಲಾಯಿತು.


ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಅಧ್ಯಕ್ಷತೆಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಜೈಜವಾನ್ ಸ್ಟೋರ್ಸ್ ನ ಮಾಲೀಕ ಅಚ್ಚಯ್ಯ ಅವರನ್ನು ಸನ್ಮಾನಿಸಲಾಯಿತು.

ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ರವೀಂದ್ರ ರೈ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ.ಸೌಮ್ಯ ಗಣರಾಜ್ ಕಾರ್ಯಕ್ರಮ ನಿರೂಪಿಸಿದರು. ನೀಮ ಜಿಲ್ಲಾಧ್ಯಕ್ಷ ಡಾ.ರಾಜಾರಾಂ ಸ್ವಾಗತಿಸಿ, ವಕ್ತಾರ ಡಾ.ಉದಯಶಂಕರ್ ವಂದಿಸಿದರು.

ಫೋಟೋ :: ಬ್ಲಡ್ ಕ್ಯಾಂಪ್

Latest Indian news

Popular Stories