ಹರೀಶ್ ಪೂಂಜಾ ಪ್ರಕರಣ| ಪೊಲೀಸರ ಕಾಲರ್ ಪಟ್ಟಿ ಹಿಡಿದು ಹೊಡೆಯುತ್ತೇನೆ ಎಂಬುವವರನ್ನು ವಶಕ್ಕೆ ತೆಗೆದುಕೊಳ್ಳುವುದು ಅಪಾರಾಧವೆ ? – ಮುನೀರ್ ಕಾಟಿಪಳ್ಳ ಪ್ರಶ್ನೆ

ಹರೀಶ್ ಪೂಂಜಾರನ್ನು ಬಂಧಿಸಿದರೆ ದ.ಕ. ಜಿಲ್ಲೆ ಬಂದ್ ಮಾಡಲು ಪೂಂಜಾ ಏನು ದೇಶೋದ್ದಾರದ ಹೋರಾಟ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿರುವುದೆ ಕಟೀಲರೆ ? ಎಂದು ಸಾಮಾಜಿಕ ಹೋರಾಟಗಾರ‌ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಜನ ಏನು ನೀವು ಕೀಲಿ ಕೊಟ್ಟಿರುವುವ ಗೊಂಬೆಗಳು ಅಂತ ತಿಳಿದಿದ್ದೀರಾ ? ಪೊಲೀಸ್ ಠಾಣೆಗೆ ಗುಂಪು ಕಟ್ಟಿ ನುಗ್ಗಿ ಪೊಲೀಸರ ಮೇಲೆ ಏರಿ ಹೋಗುವುದು ? ಪೊಲೀಸ್ ಠಾಣೆಯನ್ನು ಬೇಂಕಿ ಹಚ್ಚಿ ಸುಡುವುದಾಗಿ ಬೆದರಿಕೆ ಹಾಕುವುದು, ಪೊಲೀಸರ ಕಾಲರ್ ಪಟ್ಟಿ ಹಿಡಿದು ಹೊಡೆಯುತ್ತೇನೆ ಎಂದು ಭಾಷಣ ಬಿಗಿಯುವವರನ್ನು ಕಾನೂನು ಪ್ರಕಾರ ವಶಕ್ಕೆ ತೆಗೆದುಕೊಳ್ಳುವುದು ಅಪಾರಾಧವೆ ? ಬಿಜೆಪಿಯವರಾದರೆ ಡಿಜೆ ಹಳ್ಳಿ ಕೆಜೆ ಹಳ್ಳಿ ಮಾದರಿ ಗಲಭೆ ಎಬ್ಬಿಸಲು ಹೊರಟರೆ ಅದು “ದೇಶಪ್ರೇಮಿ” ಕೃತ್ಯವೆ ? ಬೇರೆಯವರಾದರೆ ದೇಶದ್ರೋಹ ಕೃತ್ಯವೆ ?

ಸಂಸದರಾಗಿ ನಿಮ್ಮನ್ನು ಮೂರು ಅವಧಿಗೆ ಆಯ್ಕೆ ಮಾಡಿದ ಜನತೆಗೆ ನಿಮ್ಮ ಅವಧಿಯ ಕೊನೆಯ ವಾರದಲ್ಲಿ ಈ ರೀತಿ ನಡೆದುಕೊಳ್ಳುವುದು ಶೋಭೆಯೆ ನಳಿನ್ ಕುಮಾರ್ ? ಎಷ್ಟಾದರು ನೀವು ಸಂಸದರಾಗಿ “ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ” ಎಂದು ಭಾಷಣ ಬಿಗಿದವರಲ್ಲವೆ ? ಎಂದು ಮುನೀರ್ ಕಾಟಿಪಳ್ಳ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Latest Indian news

Popular Stories