ಐಸಿವೈಎಂ ‘ಬ್ಲೂಮ್’ ಯುವ ಸಮಾವೇಶ : ಕಲ್ಯಾಣ್ಪುರ ವಲಯಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ : ಉಡುಪಿ ಧರ್ಮಕ್ಷೇತ್ರದ ಐಸಿವೈಎಮ್‌ನ ಸಮಾವೇಶವು ಸಪ್ಟೆಂಬರ್ 24 ರಂದು ಕಲ್ಯಾಣ್ಪುರ ಮೌಂಟ್‌ರೋಜರಿ ಚರ್ಚಿನ
ಸಭಾಂಗಣದಲ್ಲಿ ಅಯೋಜಿಸಲಾಗಿತ್ತು. ಉದ್ಗಾಟನಾ
ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಧರ್ಮಕೇಂದ್ರದ ಶ್ರೇಷ್ಟ ಗುರುಗಳಾದ ವಂ. ಫರ್ಡಿನಾಂಡ್ ಗೊನ್ಸಾಲ್ವೆಸ್ ರವರು
ವಹಿಸಿದ್ದರು. ಮುಖ್ಯ ಆಥಿತಿಯಾಗಿ ಸಂತೆಕಟ್ಟೆ ಮೌಂಟ್‌ರೋಜರಿ ಚರ್ಚಿನ ಧರ್ಮಗುರುಗಳಾದ ವಂ. ಗುರು ಡಾ| ರೋಕ್
ಡಿ’ಸೋಜಾ ಮತ್ತು ದಾಯ್ಜಿವಲ್ಡ್ ಮಾಧ್ಯಮದ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ ವಹಿಸಿದ್ದರು. ಕರ್ನಾಟಕ
ಪ್ರಾಂತೀಯ ಐಸಿವೈಎಮ್ ಅಧ್ಯಕ್ಷ ನೇವಿನ್ ಆಂಟ್ಯನಿ, ವೈಸಿಎಸ್/ ವೈಎಸ್‌ಎಮ್ ರಾಷ್ಟೀಯ ಅಧ್ಯಕ್ಷ ಅ್ಯನ್ಸನ್ ನಜರೆತ್, ಸಂತೆಕಟ್ಟೆ
ಮೌoಟ್‌ರೋಜರಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಲೂಕ್ ಡಿ’ಸೋಜಾ, ಉಡುಪಿ ಧರ್ಮಕೇಂದ್ರದ ಐಸಿವೈಎಮ್
ನಿರ್ದೇಶರಾದ ವಂ. ಗುರು ಸ್ಟೀವನ್ ಪೆರ್ನಾಂಡಿಸ್, ಉಡುಪಿ ವಲಯದ ಐಸಿವೈಯಮ್ ನಿರ್ದೇಶರಾದ ವಂ. ಗುರು ರೋನ್ಸನ್ ಡಿ’ಸೋಜಾ, ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಅಧ್ಯಕ್ಷೆ ಅ್ಯಶ್ಲಿ ಡಿ’ಸೋಜಾ, ಕಾರ್ಯದರ್ಶಿ ಶೈನಿ ಅಲ್ವಾ ವೇದಿಕೆಯಲ್ಲಿ
ಉಪಸ್ಥಿತರಿದ್ದರು.
IMG 20230926 WA0060 Crime

ಮುಖ್ಯ ಆತಿಥಿ ವಂದನೀಯ ಗುರು ಡಾ. ರೋಕ್ ಡಿ’ಸೋಜಾ ಮಾತಾಡಿ, ಯುವಜನರು ಆವಕಾಶ ಸಿಕ್ಕಾಗ
ಆದರ ಸಧುಪಯೋಗ ಮಾಡಬೇಕೆಂದು ಹೇಳಿದರು. ಬಳಿಕ ಉಡುಪಿ ಧರ್ಮಕೇಂದ್ರದ ನೂತನ ಶ್ರೇಷ್ಟ ಗುರುಗಳಾಗಿ ಎಪ್ರಿಲ್ನಲ್ಲಿ ಹುದ್ದೆ
ಸ್ವೀಕಾರಿಸಿದ ವಂ. ಫಾ. ಫರ್ಡಿನಾಂಡ್ ಗೊನ್ಸಾಲ್ವೆಸ್ ಅವರನ್ನು ಸನ್ಮಾನಿಸಲಾಯಿತು. ಅವರು ತಮ್ಮ ಅದ್ಯಕ್ಷೀಯ ಭಾಷಣದಲ್ಲಿ, ಇಲ್ಲಿ
ನೆರೆದಿರುವ ಎಲ್ಲಾ ಯುವಜನರು ನಮ್ಮ ಉಡುಪಿ ಧರ್ಮಕ್ರೇಂದ್ರದ ಮುಂದಿನ ಭವಿಷ್ಯ. ನಾವು ಕಲಿಯುವಾಗ ಸಣ್ಣ ಪುಟ್ಟ ಕೆಲಸ
ಮಾಡಲು ಆವಕಾಶ ಸಿಕ್ಕಾಗ ಆದರ ಸದುಪಯೋಗ ಪಡಿಸಬೇಕೆಂದರು.

ಈ ಯುವಸಮಾವೇಶ ಮೌಂಟ್‌ರೋಜರಿ ಚರ್ಚ್ ಕಲ್ಯಾಣ್ಪುದಲ್ಲಿ
ಅಯೋಜಿಸಲು ಸಹಕಾರ ನಿಡಿದ ಮೌಂಟ್‌ರೋಜರಿ ಚರ್ಚಿನ ಧರ್ಮಗುರುಗಳಾದ ವಂದನೀಯ ಗುರು ಡಾ| ರೋಕ್
ಡಿ’ಸೋಜಾಆವರನ್ನು ಸನ್ಮಾನಿಸಲಾಯಿತು.

ತದ ನಂತರ ಮುಖ್ಯ ಆಥಿತಿಯಾಗಿ ದಾಯ್ಜಿವಲ್ಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಆದ
ವಾಲ್ಟರ್ ನಂದಳಿಕೆಯವರನ್ನು ಸನ್ಮಾನಿಸಲಾಯಿತು. ಪ್ರೀತೆಶ್ ಪಿಂಟೊ ವಂದಿಸಿ, ಆಶೀಷ್ ಮಿನೇಜಸ್ ಕಾರ್ಯನಿರೂಪಣೆ ಮಾಡಿದರು.

ಉದ್ಗಾಟನ ಸಮಾರಂಭದ ನಂತರ ದಾಯ್ಜಿವಲ್ಡ್ನ ಮ್ಯಾನೇಜಿಂಗ್ ಡೈರೆಕ್ಟರ್‌ ಆದ ವಾಲ್ಟರ್ ನಂದಳಿಕೆಯವರು ಯುವಜನತೆ ಮತ್ತು ಸಂಪರ್ಕ ಮಾಧ್ಯಮಗಳ ಉಪಯೋಗ, ಆದರಿಂದಾಗುವ ಸಮಸ್ಯೆಗಳ ಬಗ್ಗೆ ಯುವಜನರಿಗೆ ಸವಿಸ್ತಾರ ಮಾಹಿತಿ ನೀಡಿದರು.

ವoದನೀಯ ಗುರು ಜೋಕಿಮ್ ಡಿ’ಸೋಜರವರು ಭಾರತದಲ್ಲಿ ಭಾರತೀಯನಾಗಿ ಯುವಜನರ ಪಾತ್ರ ಈ ಬಗ್ಗೆ ಯುವಜನರಿಗೆ ಸವಿಸ್ತಾರ ಮಾಹಿತಿ ನೀಡಿದರು. ದಿವ್ಯ ಬಲಿಪೂಜೆಯನ್ನು ಉಡುಪಿ ವಲಯದ ಐಸಿವೈಎಮ್ ನಿರ್ದೇಶರಾದ ವಂದನೀಯ ಗುರು ರೋನ್ಸನ್
ಡಿ’ಸೋಜಾರವರು ನೇರವೇರಿಸಿದರು.

ಮಧ್ಯಾಹ್ನದ ಬಳಿಕ 5 ವಲಯಗಳ ನಡುವೆ ಸಂಗೀತ, ನ್ರತ್ಯ ಹಾಗೂ ಪ್ಯಾಶನ್ ಶೊ ಸ್ಪರ್ಧೆ ನಡೆಯಿತು.
ವಂ. ಗುರು ರೊಬಿನ್ ಸಾಂತುಮಾಯೊರ್, ಸ್ವಪ್ನಾ ಡಿ’ಸಿಲ್ವಾ ಮತ್ತು ಆಶ್ವಿನ್ ಡಿ’ಕೊಸ್ಟಾರವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಸಮಾರೋಪ ಸಮಾರಂಭದ ಆಧ್ಯಕ್ಷತೆಯನ್ನು ಕಲ್ಯಾಣ್ಪುರ ಮಿಲಾಗ್ರಿಸ್ ಕಾಥೆದ್ರಲಿನ ಧರ್ಮಗುರುಗಳಾದ ಅತೀ ವಂದನೀಯ ಗುರು ವಲೇರಿಯನ್ ಮೆಂಡೋನ್ಸಾ ವಹಿಸಿದ್ದರು. ಉಡುಪಿ ಧರ್ಮಕೇಂದ್ರದ ಐಸಿವೈಯಮ್ ಕಾರ್ಯದರ್ಶಿ ಶೈನಿ
ಅಲ್ವಾ ಸ್ವಾಗತಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಕೇಂದ್ರದ 5 ವಲಯಗಳ ಐಸಿವೈಯಮ್ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರು ಹೀಗಿದ್ದಾರೆ

ಕವಿತೆ ಪ್ರಥಮ : ರೀಶಲ್ ಲೋಬೊ, ಬೈಂದೂರು
ದ್ವಿತೀಯ : ಅನ್ಸಿಟಾ ಡಿಸೋಜಾ ಮೂಡುಬೆಳ್ಳೆ
ತೃತೀಯ : ಮೆಲಿಸ್ಸಾ ಕುಟಿನ್ನ

ರೀಲ್ಸ್ ಸ್ಪರ್ಧೆ : ಮಿಲಾಗ್ರೀಸ್ ಐಸಿವೈಎಂ
ಮಿಯಾರ್ ಐಸಿವೈಎಂ
ಕಾರ್ಕಳ ಟೌನ್ ಐಸಿವೈಎಂ

ಸ್ಟ್ಯಾಂಡ್ ಅಪ್ ಕಾಮಿಡಿ
ಪ್ರಥಮ : ದಿವ್ಯ ಪಿಂಟೊ ಶಿರ್ವ

ನೃತ್ಯ ಸ್ಪರ್ಧೆ
ಪ್ರಥಮ : ಕಲ್ಯಾಣ್‌ಪುರ ವಲಯ
ದ್ವಿತೀಯ : ಉಡುಪಿ ವಲಯ
ತೃತೀಯ : ಕಾರ್ಕಳ ವಲಯ

ಫ್ಯಾಶನ್ ಶೋ ಸ್ಪರ್ಧೆ
ಪ್ರಥಮ : ಕಾರ್ಕಳ ವಲಯ
ದ್ವಿತೀಯ : ಉಡುಪಿ ವಲಯ
ತೃತೀಯ : ಕಲ್ಯಾಣ್ಪುರ ವಲಯ

ಸಂಗೀತ ಸ್ಪರ್ಧೆ
ಪ್ರಥಮ : ಕಲ್ಯಾಣ್‌ಪುರ ವಲಯ
ದ್ವಿತೀಯ : ಉಡುಪಿ ವಲಯ
ತೃತೀಯ : ಕಾರ್ಕಳ ವಲಯ

ಸಮಗ್ರ (ಚಾಂಪಿಯನ್) ಪ್ರಶಸ್ತಿ
ಪ್ರಥಮ : ಕಲ್ಯಾಣ್‌ಪುರ ವಲಯ
ರನ್ನರ್ ಅಪ್ ಉಡುಪಿ ವಲಯ

ಗೋಡ್ವಿನ್ ಕಾರ್ಯಕ್ರಮ ನಿರೂಪಿಸಿದರೆ, ಐಸಿವೈಎಂ ನಿರ್ದೇಶಕ ವOದನೀಯ ಸ್ಟೀವನ್ ಫೆರ್ನಾಂಡಿಸ್ ವOದಿಸಿದರು. ಉಡುಪಿ ಧರ್ಮ ಪ್ರಾಂತ್ಯದ 450 ಅಧಿಕ ಯುವ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Latest Indian news

Popular Stories