ತೆಲಂಗಾಣ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು | ರೇವಂತ್ ರೆಡ್ಡಿ ಮೇಲೆ ಟಿಕೆಟ್ ಮಾರಾಟದ ಅರೋಪ

ವರದಿ: ಹನುಮಂತ್ ದೇಶ್ ಮುಖ್

ಕಾಂಗ್ರೆಸ್ ಪಕ್ಷದಲ್ಲಿ ಸದಾ ಜಗಳ ನಡೆಯುತ್ತಲೇ ಇರುತ್ತದೆ. ಗಲ್ಲಿಯಿಂದ ದಿಲ್ಲಿಯವರೆಗೂ ಇದೇ ಪರಿಸ್ಥಿತಿ, ಹಾಗಾಗಿಯೇ ಎರಡು ಹೆಜ್ಜೆ ಮುಂದೆ, ನಾಲ್ಕು ಹೆಜ್ಜೆ ಹಿಂದಕ್ಕೆ ಎಂಬಂತೆ ಜನಮಾನಸದಲ್ಲಿ ಕಾಂಗ್ರೆಸ್ ಪಕ್ಷ ಪ್ರವೇಶಿಸಿದೆ. ಹಲವು ಹಿರಿಯ ನಾಯಕರಿದ್ದು, ಯಶಸ್ಸು ಗಳಿಸುವ ಸಾಮರ್ಥ್ಯವಿದ್ದರೂ ಅವರ ನಡುವಿನ ಜಗಳವೇ ಸೋಲಿಗೆ ಕಾರಣ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
ರೇವಂತ್ ರೆಡ್ಡಿ ಟಿಪಿಸಿಸಿ ಅಧ್ಯಕ್ಷರಾದ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ವೇಗ ಸಿಕ್ಕಿತು. ಈ ಬಾರಿ ಬಿಆರ್ ಎಸ್ ಗೆ ಕಾಂಗ್ರೆಸ್ ಪ್ರಮುಖ ಸವಾಲು ಎನ್ನುವ ಮಟ್ಟಕ್ಕೆ ತಲುಪಿದೆ.ಅದರೆ
ಈ ಸಂದರ್ಭದಲ್ಲಿ ತೆಲಂಗಾಣ ಕಾಂಗ್ರೆಸ್‌ನಲ್ಲಿರುವ ಕೆಲವು ಹಿರಿಯರು ಮತ್ತು ರೇವಂತ್ ರೆಡ್ಡಿ ಅವರ ನಡುವೆ ಬಿರುಕು ಎದುರಾಗಿದ್ದು, ಕೆಲವು ವಿಷಯಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಾಗುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ ವರಿಷ್ಠ ಮನೋಹರ್ ರೆಡ್ಡಿ ನೀಡಿರುವ ಹೇಳಿಕೆಗಳು ಸಂಚಲನ ಮೂಡಿಸಿವೆ. ಮಹೇಶ್ವರಂ ಟಿಕೆಟ್‌ಗಾಗಿ 10 ಕೋಟಿ ರೂಪಾಯಿ 5 ಎಕರೆ ಜಮೀನು ಪಡೆಯುತ್ತಿದ್ದಾರೆ ಎಂದು ಮಾಧ್ಯಮ ಮುಖಾಂತರ ಆರೋಪ ಮಾಡಿದ್ದಾರೆ.

ಇದು ಅಲ್ಲದೇ ಬಂಡಂಗ್ ಪೇಟೆ ಮೇಯರ್ ಚಿಗುರಿಂತಾ ಪಾರಿಜಾತ ನರಸಿಂಹ ರೆಡ್ಡಿ ಅವರಿಂದ 10 ಕೋಟಿ ರೂಪಾಯಿ ಹಾಗೂ 5 ಎಕರೆ ಜಮೀನು ಬರೆಸಿಕೊಂಡಿದ್ದಾರೆ ಎಂದು ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ವಿರುದ್ದ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ

ಸಮಯ ಬಂದಾಗ ಈ ಎಲ್ಲ ವಿಷಯಗಳನ್ನು ಸಾಕ್ಷ್ಯ ಸಮೇತ ಬಯಲಿಗೆಳೆಯುತ್ತೇವೆ ಎಂದು ಮನೋಹರರೆಡ್ಡಿ ಮಾಹಿತಿ ನೀಡಿದ್ದಾರೆ ,
ಸದ್ಯ ಅವರ ಹೇಳಿಕೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಹಣಮಂತ ದೇಶಮುಖ
THG ಪ್ರತಿನಿಧಿ

Latest Indian news

Popular Stories