ಕಾಪು: ಮೀನುಗಾರಿಕೆಯ ಸಂದರ್ಭದಲ್ಲಿ ಅರಬಿ ಸಮುದ್ರದಲ್ಲಿ ಬಿದ್ದು ಮೀನುಗಾರ ಮೃತಪಟ್ಟಿದ್ದಾನೆ.
ರಾಮಾಜು (54) ಇವರು ಬೋಟನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಮಾರ್ಚ್ 13 ರಂದು ಮೀನುಗಾರಿಕೆ ಬಗ್ಗೆ ಮನೆಯಿಂದ ಹೋಗಿದ್ದಾರೆ.
ಪೊಲಿಪು ಬಳಿ ಅರಬ್ಬೀ ಸಮುದ್ರದಲ್ಲಿ ಮೀನು ಹಿಡಿಯುತ್ತಿರುವಾಗ ಸಮುದ್ರದಲ್ಲಿ ಹಾಕಿದ್ದ ಬಲೆಯನ್ನು ಮೇಲಕ್ಕೆ ಎಳೆಯುತ್ತಿದ್ದ ಸಮಯ ರಾತ್ರಿ 10:00 ಗಂಟೆ ಸುಮಾರಿಗೆ ರಾಮಾಜು ರವರು ಒಮ್ಮೇಲೆ ಬಲೆಯೊಂದಿಗೆ ಬೋಟ್ ನಿಂದ ಸಮುದ್ರದ ನೀರಿಗೆ ಬಿದ್ದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಾಮಾಜುರವರನ್ನು ಒಂದು ಅಂಬುಲೇನ್ಸ್ ಮೂಲಕ ಮಣಿಪಾಲ ಕೆ.ಎಮ್.ಸಿ ಅಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ವೈದ್ಯರು ಪರೀಕ್ಷಿಸಿ 11:25 ಗಂಟೆಯ ಸುಮಾರಿಗೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.