ಕಾರವಾರ | ಯುವತಿಗೆ ಚಾಕು ಇರಿದಿದ್ದ ಆಟೋ ಚಾಲಕನ ಬಂಧನ

ಕಾರವಾರ: ನಗರದ ಯುವತಿಗೆ ಚಾಕು ಇರಿದಿದ್ದ ಆಟೋ ಚಾಲಕ ರವಿ (42) ಎಂಬಾತನನ್ನು ಬಂಧಿಸಿದ ನಗರ ಠಾಣೆಯ ಪೊಲೀಸರು ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿ ರವಿಯನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶ ನೀಡಿದ್ದು, ಆತನನ್ನು ಇಂದು ಜೈಲಿಗೆ ಕಳುಹಿಸಲಾಗಿದೆ.


ನಗರದಲ್ಲಿ ರವಿವಾರ ರಾತ್ರಿ ಯುವತಿಯೋರ್ವಳಿಗೆ ಆಟೋ‌ಚಾಲಕ ರವಿ ಯಾನೆ ರವಿ ಶಂಕರ್ ಯಾನೆ ಕಟ್ಟಪ್ಪ ಚಾಕುವಿನಿಂದ ಇರಿದಿದ್ದ. ತಕ್ಷಣ ಆಕೆಯನ್ನು ‌ಮೆಡಿಕಲ್ ಕಾಲೇಜಿಗೆ ಸೇರಿಸಿದ್ದ ರಿಂದ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಐಸಿಯು ನಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಟೋ ಚಾಲಕ ನಂದನಗದ್ದಾ ನಿವಾಸಿಯಾಗಿದ್ದು, ವಿವಾಹಿತ . ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಆದರೆ ರವಿ 26 ವರ್ಷದ ಯುವತಿ ಜೊತೆ ಆಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ನಂತರ ಯುವತಿ ಆತನಿಂದ ದೂರವಾಗಿ ಹೊಸ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುವಾಗ , ಆಟೋ ಚಾಲಕ , ಯುವತಿಯ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ. ನಂತರ ಮಾತಿಗೆ ಮಾತು ಬೆಳೆದು ಆಕೆಗೆ ಚಾಕುವಿನಿಂದ ಇರಿದ ಎಂದು ಯುವತಿಯ ಹೇಳಿಕೆ ಆಧರಿಸಿ ,ಪೊಲೀಸರು ರವಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ಪ್ರಕರಣದ ಆರೋಪಿ ಆಟೋ ಚಾಲಕ ರವಿಯನ್ನು ಬಂಧಿಸಿ, ನ್ಯಾಯಾಲಯದ ಎದುರು ಹಾಜರು ಮಾಡಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories