ಕೊಡಗು: ಮತದಾನದಿಂದ ವಂಚಿತರಾದವರಿಗೆ ಮತದಾನಕ್ಕೆ ಅವಕಾಶ

ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘ ಹೈ ಕೋರ್ಟ್ ನಿಂದ ಮಹತ್ವದ ಆದೇಶ


ಇದೇ ಭಾನುವಾರರಂದು ಕೊಡಗು ಜಿಲ್ಲಾ ಪ್ರಗತಿಪರ ಜೇನು ಕೃಷಿಕರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಹಾಲಿ ಆಡಳಿತ ಮಂಡಲಿ ರಾಜಕೀಯ ದ್ವೇಷದಿಂದ ಸುಮಾರು 40 ಮಂದಿ ಸದಸ್ಯರನ್ನು ಮತಪಟ್ಟಿಯಿಂದ ಕೈಬಿಟ್ಟಿತ್ತು.


ಮತದಾನದಿಂದ ವಂಚಿತರಾದ ಸದಸ್ಯರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರ ಗಮನಕ್ಕೆ ತಂದ ಮೇರೆಗೆ ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.
AKS Legal ನ ವಕೀಲರಾದ ಲೀಲಾ ದೇವಾಡಿಗ ರವರ ಸಮರ್ಥವಾದವನ್ನು ಆಲಿಸಿದ ಹೈ ಕೋರ್ಟ್ ನ್ಯಾಯಪೀಠ
ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘದ ಸದಸ್ಯರ ಮತದಾನದ ಹಕ್ಕು ಕಸಿದುಕೊಂಡಿರುವುದು ಆಡಳಿತ ನ್ಯೂನತೆಯಿಂದ ಕೂಡಿದ್ದು ಕಾನೂನಿಗೆ ವಿರುದ್ದವಾಗಿರುವುದರಿಂದ
ಭಾನುವಾರದಂದು ನಡೆಯಲಿರುವ ಚುನಾವಣೆಯಲ್ಲಿ 40 ಜನರಿಗೂ ಮತದಾನದ ಹಕ್ಕು ನೀಡಬೇಕು ಎಂದು ಇಂದು ಮಹತ್ವದ ಆದೇಶ ನೀಡಿದೆ.ಸಹಕಾರ ಸಂಘಗಳ ನಿಭಂದಕರು ಹಾಗೂ ಉಪ ನಿಭಂದಕರು ಹಾಗೂ ಸಂಭಂದ ಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಆದೇಶವನ್ನು ಪಾಲಿಸುವಂತೆ ಸೂಚನೆಯನ್ನು ನೀಡಿದೆ.

ಈ ಆದೇಶ ಕೊಡಗಿನ ಅನೇಕ ಸಹಕಾರ ಸಂಘಗಳು ರಾಜಕೀಯ ದುರುದ್ದೇಶದಿಂದ ಮತದಾನದ ಹಕ್ಕು ಕಸಿಯುವ ಪ್ರವೃತ್ತಿಗೆ ಕಡಿವಾಣ ಹಾಕಿದೆ.

AKS legal ಖ್ಯಾತ ನ್ಯಾಯವಾದಿ ದಿವಂಗತ ಎ.ಕೆ.ಸುಬ್ಬಯ್ಯ ನವರಿಂದ ಸ್ಥಾಪಿತವಾದ ಎ.ಎಸ್.ಪೊನ್ನಣ್ಣ ನವರ ಒಡೆತನದ ಸಂಸ್ಥೆಯಾಗಿದೆ. ರಾಜ್ಯಉಚ್ಚ ನ್ಯಾಯಾಲಯದ ಈ ಮಹತ್ವದ ಆದೇಶದಿಂದ ಪ್ರಸ್ತುತ ಆಡಳಿತಮಂಡಳಿಗೆ ಮುಜುಗರ ಉಂಟಾಗಿದೆ.

Latest Indian news

Popular Stories