ಅಮೆರಿಕ ಪ್ರವೇಶಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯ

ವಾಷಿಂಗ್ಟನ್,ಜ.22:- ಅಮೆರಿಕ ಪ್ರವೇಶಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ನೂತನ ಅಧ್ಯಕ್ಷ ಜೊ ಬೈಡನ್ ಕೋವಿಡ್-19ಗೆ ಸಂಬಂಧಪಟ್ಟ ಹಲವು ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ. ವಿದೇಶಗಳಿಂದ ಅಮೆರಿಕಕ್ಕೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುವ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.
ಮಾಸ್ಕ್ ಧರಿಸುವುದು ಮಾತ್ರವಲ್ಲದೆ, ಹೊರದೇಶಗಳಿಂದ ಬರುವ ಪ್ರತಿಯೊಬ್ಬರೂ ವಿಮಾನ ನಿಲ್ದಾಣದಿಂದ ಹೊರಬರುವ ಮುನ್ನ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ನಂತರ ಇಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಈ ಸಮಯದಲ್ಲಿ ಜನರಿಗೆ ಅಗತ್ಯ ಆರೋಗ್ಯ ಸೇವೆ ದೊರಕಲು, ಔಷಧಿಗಳು, ಲಸಿಕೆಗಳು, ರಕ್ಷಣಾತ್ಮಕ ಸಲಕರಣೆಗಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಸರ್ಕಾರ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.

Latest Indian news

Popular Stories