ಮಲ್ಪೆ | ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಉಡುಪಿ,ಜೂ.26; ಮೂಡುಬೆಟ್ಟು ಕೊಡವೂರಿನಲ್ಲಿ ವಾಸವಾಗಿದ್ದ  ಮಹಿಳೆಯೊರ್ವರ ಶವವು ಕೊಳೆತ ಸ್ಥಿತಿಯಲ್ಲಿ ಸೋಮವಾರ ಕಂಡು ಬಂದಿದೆ.  ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಮಹಿಳೆಯನ್ನು ಜಾಗ್ರತಿ ಶೆಟ್ಟಿ (60ವ) ಎಂದು ತಿಳಿದುಬಂದಿದೆ. ಮಲ್ಪೆ ಪೋಲಿಸ್ ಠಾಣೆಯ ಪಿ.ಎಸ್.ಐ ಗುರುನಾಥ್ ಹಾದಿಮನೆ, ಪಿ.ಎಸ್.ಐ ಸುಷ್ಮಾ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ಈಶ್ವರ್ ಮಲ್ಪೆ ಸಹಕರಿಸಿದರು.

Latest Indian news

Popular Stories