Vijayapura

ನಾನೇ ಹಿಂದೂ ಹುಲಿ ಎಂದು ಜಂಬಕೊಚ್ಚಿಕೊಳ್ಳುವ ನಾಯಕರು ಈ ಹಿಂದೆ ಟೋಪಿ ಧರಿಸಿ ನಮಾಜ್‌ಗೆ ಹೋಗಿದ್ದು ಮರೆತಿದ್ದಾರೆಯೇ? – ಯತ್ನಾಳ್ ವಿರುದ್ಧ ನಿರಾಣಿ ಗುಡುಗು

ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರು ಬಿಜೆಪಿ ಸಮಾವೇಶಕ್ಕೆ ಅಡ್ಡಿಪಡಿಸಿದ ಘಟನೆಯಿಂದಾಗಿ ಆಕ್ರೋಶದಿಂದ ಹೊರ ನಡೆದ ಮಾಜಿ ಸಚಿವ ಮುರುಗೇಶ ನಿರಾಣಿ ಯತ್ನಾಳ ವಿರುದ್ಧ ಪರೋಕ್ಷವಾಗಿ ಟೀಕಾಸ್ತçಗಳ ಸುರಿಮಳೆಗೈದರು.


ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗೇಶ ನಿರಾಣಿ, ನನ್ನನ್ನು ಸೋಲಿಸಲು ದುಡ್ಡು ಕೊಟ್ಟು ಕಳುಹಿಸಿದ್ದಾರೆ ಎಂದು ಪದೇ ಪದೇ ವ್ಯಂಗ್ಯವಾಡುವ ನಗರ ಶಾಸಕರು ತಾಕತ್ತಿದ್ದರೆ ಬಹಿರಂಗವಾಗಿ ಇಲ್ಲಿ ಬಂದು ಉತ್ತರಿಸಲಿ, ನಾನೇ ಸಿಎಂ, ವಿಧಾನಸೌಧದ ಮೂರನೇಯ ಮಹಡಿಯಲ್ಲಿ ನಾನೇ ಕೂಡುವೆ ಎಂದು ಅಹಂ ಆಗಿ ಹೇಳುವ ಅವರು ಮೊದಲು ಈ ಬಗ್ಗೆ ಉತ್ತರಿಸಲಿ ಎಂದು ಗರಂ ಆಗಿ ಸವಾಲು ಹಾಕಿದರು.
ದುಡ್ಡು ಕೊಟ್ಟಿದ್ದಾರೆ, ದುಡ್ಡು ಕೊಟ್ಟಿದ್ದಾರೆ ಎಂದು ನಾಲಿಗೆ ಹರಿಬಿಡುವ ನಾಯಕರು, ಮನಬಂದAತೆ ಮಾತನಾಡುತ್ತಾರೆ, ಅವರ ನಾಲಿಗೆಗೆ ಲಗಾಮು ಇಲ್ಲ, ನಾನು ಹಣ ಕಳಿಸಿದ್ದು ನಮ್ಮ ಪಾರ್ಟಿ ಅವರಿಗೆ ಗೊತ್ತಿದೆ ಎಂದರು.


ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕರಿರುವ ಸಭೆಯಲ್ಲಿ ಈ ರೀತಿಯ ಆಕ್ಷೇಪ ವ್ಯಕ್ತವಾಗುವಂತೆ ಮಾಡಿದ್ದು ಸರಿಯೇ? ಈ ರೀತಿ ಢೋಂಗಿ ರಾಜಕಾರಣ ನಡೆಯಲ್ಲ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಅಶಿಸ್ತಿನ ನಡವಳಿಕೆಗೆ ಬಿಜೆಪಿ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಿದೆ ಎಂದು ನಿರಾಣಿ ಹೇಳಿದರು.


2018 ರಲ್ಲಿ ಕಾರಜೋಳ ಅವರ ಪುತ್ರ ಡಾ.ಗೋಪಾಲ ಕಾರಜೋಳ ಅವರು ಸ್ಪರ್ಧೆ ಮಾಡಿದ್ದರು, ಅವರನ್ನು ಸೋಲಿಸಿದ್ದು ಯಾರು? ಬಬಲೇಶ್ವರದಿಂದ ಸ್ಪರ್ಧೆ ಮಾಡಿದ ವಿಜುಗೌಡ ಪಾಟೀಲರನ್ನು ಸೋಲಿಸಿದ್ದು ಯಾರು? ನಾನೇ ಹಿಂದೂ ಹುಲಿ ಎಂದು ಜಂಬಕೊಚ್ಚಿಕೊಳ್ಳುವ ನಾಯಕರು ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಹೋಗಿ ಟೋಪಿ ಧರಿಸಿ ನಮಾಜ್‌ಗೆ ಹೋಗಿದ್ದು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು.


ಇಂದು ನಾವು ಸೋತಿರಬಹುದು, ಇಂದಿರಾ ಗಾಂಧೀ, ಅಟಲ್ ಬಿಹಾರಿ ವಾಜಪೇಯಿ, ದೇವೆಗೌಡ ಹೀಗೆ ಅನೇಕ ದಿಗ್ಗಜರು ಸೋತಿದ್ದಾರೆ, ಸೋಲು-ಗೆಲುವು ಸಾಮಾನ್ಯ, ಆದರೆ ನಾನೇ ಗೆದ್ದಿರುವೆ, ನಾನೇ ಹಿರೋ ಎಂದು ಬಿಂಬಿಸಿಕೊAಡು ತಮ್ಮ ಬೆನ್ನು ಚಪ್ಪರಿಸಿಕೊಂಡು ಧಿಮಾಕಿನ ಮಾತು ಹೇಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಪೇಡೆ ಹಂಚಿದವರು ಯಾರು ಎಂಬುದು ಗೊತ್ತಿದೆ
ಬೇರೆಯವರನ್ನು ಸೋಲಿಸಲು ಹೋಗಿ ಡುಮ್ಕಿ ಹೊಡೆದಿದ್ದಾರೆ ಎಂದು ಹೇಳುವ ಇವರು ಎಷ್ಟು ಸಲ ಡುಮ್ಕಿ ಹೊಡೆದಿದ್ದಾರೆ, ಇವರೇನು ಸೋಲಿಲ್ಲದ ಸರದಾರರೇ ಎಂದು ನಿರಾಣಿ ವ್ಯಂಗ್ಯವಾಡಿದರು. ಈ ಹಿಂದೆ ಬಿ.ಎಲ್. ಪಾಟೀಲರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಪೇಡೆ ಹಂಚಿದವರು ಯಾರು ಎಂಬುದು ಅವಳಿ ಜಿಲ್ಲೆ ಜನತೆಗೆ ಗೊತ್ತಿದೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button