ಮಲ್ಪೆ: ಸ್ಕೂಟರ್ ನಲ್ಲಿಟ್ಟಿದ್ದ 1.5 ಲಕ್ಷ ರೂಪಾಯಿಯನ್ನು ಕಳ್ಳನೊಬ್ಬ ಎಗರಿಸಿದ್ದಾನೆ.
ಶಮಿತ್ ಎಂಬುವವರು ಮೀನು ಮಾರಾಟದ ಬಿಲ್ಲಿನ ರೂ. 1,50,000/- ಹಣವನ್ನು ತೆಗೆದುಕೊಂಡು ಪೌಚ್ ನಲ್ಲಿ ಹಾಕಿ ಸ್ಕೂಟರಿನ ಸೀಟಿನ ಅಡಿ ಡಿಕ್ಕಿಯಲ್ಲಿಟ್ಟು ಬೀಗ ಹಾಕಿ ಇನ್ನೊಂದು ಮೀನು ಪಾರ್ಟಿ “ ಎಎಮ್ಎನ್ “ ಮಲ್ಪೆ ಕಛೇರಿಗೆ ಮೀನು ಮಾರಾಟದ ಬಿಲ್ಲಿನ ಹಣವನ್ನು ತರಲು ಹೋಗಿದ್ದು, ವಾಪಾಸು 11:00 ಸಮಯಕ್ಕೆ ಬಂದು ಸ್ಕೂಟರಿನ ಡಿಕ್ಕಿಯಲ್ಲಿಟ್ಟಿದ್ದ ಹಣವನ್ನು ಪರಿಶೀಲಿಸಿದಾಗ ಡಿಕ್ಕಿಯಲ್ಲಿದ್ದ ಹಣದ ಪೌಚ್ ಇರಲಿಲ್ಲ.
ಆಗ ಸುತ್ತ ಮುತ್ತ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಪಕ್ಕದ ಪ್ರಮೋದ್ ರವರ ವೈರ್ಲೆಸ್ ಅಂಗಡಿಗೆ ಹೋಗಿ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಸಮಯ ಬೆಳಿಗ್ಗೆ 10:56 ಸುಮಾರಿಗೆ ಓರ್ವ ವ್ಯಕ್ತಿ ಸ್ಕೂಟರಿನ ಸೀಟನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 22 /2024 ಕಲಂ:379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.