ಮಂಗಳೂರು, ಎ.5: ದನ ಕಳ್ಳರ ಆರೋಪದ ಮೇಲೆ ಇಬ್ಬರನ್ನು ಕಾವೂರು ಪೊಲೀಸರು ಎಪ್ರಿಲ್ 5 ರಂದು ಮಂಗಳವಾರ ನಗರದಲ್ಲಿ ಬಂಧಿಸಿದ್ದಾರೆ.
ಆರೋಪಿಗಳು ಫೆಬ್ರವರಿ 11, 2023 ರಂದು ಕಾವೂರು ಗಾಂಧಿನಗರದಲ್ಲಿ ಕರುವನ್ನು ಕದ್ದಿದ್ದರು.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಅಮ್ಮೆಮಾರ್ ನಿವಾಸಿ ಸಾಹುಲ್ ಹಮ್ಮದ್ (33) ಅಲಿಯಾಸ್ ಟಿಂಬರ್ ಹಮ್ಮಿ ಮತ್ತು ಅಮ್ಮೆಮಾರ್ ನಿವಾಸಿ ಮಹಮ್ಮದ್ ಸಾದಿಕ್ ಅಲಿಯಾಸ್ ಸಾದಿಕ್ @ ನೀಲಿ ಸಾದಿಕ್ ಎಂದು ಗುರುತಿಸಲಾಗಿದೆ.
ಏಪ್ರಿಲ್ 4 ರಂದು ಬುಧವಾರ ಆರೋಪಿಯನ್ನು ಬಂಧಿಸಿದ ಪೊಲೀಸರು 1,50,000 ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಪ್ರಕರಣಗಳು ದಾಖಲಾಗಿವೆ.
ಇನ್ಸ್ ಪೆಕ್ಟರ್ ಗುರುರಾಜ್ ಹಾಗೂ ಸಬ್ ಇನ್ಸ್ ಪೆಕ್ಟರ್ ರಘು ನಾಯಕ್ ಮಾರ್ಗದರ್ಶನದಲ್ಲಿ ಕಾವೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.