ಮಣಿಪಾಲ: 20 ಹರೆಯದ ಯುವನೊಬ್ಬ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರನ್ನು ಸತ್ಯಂ ಸುಮನ್ (20) ಎಂದು ಗುರುತಿಸಲಾಗಿದೆ.
ಇವರು MCHP ಬಿಲ್ಡಿಂಗ್ ಮೇಲಿಂದ ಬಿದ್ದಿದ್ದು ತಕ್ಷಣ ಅವರನ್ನು ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಹೋದಾಗ ಮದ್ಯಾಹ್ನ 02:28 ಗಂಟೆಗೆ ಪರೀಕ್ಷಿಸಿದ ವೈದ್ಯರು ಸತ್ಯಂ ಸುಮನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.