ಮಣಿಪಾಲ: ಶಿವಳ್ಳಿ ಗ್ರಾಮದ ಯುವಕ ನಾಪತ್ತೆ

ಮಣಿಪಾಲ: ಶಿವಳ್ಳಿ  ಗ್ರಾಮದ ಸುದರ್ಶನ್ (38) ಇವರು ದಿನಾಂಕ: 08.02.2024 ರಂದು ಬೆಳಿಗ್ಗೆ 11:30 ಗಂಟೆಗೆಯಿಂದ 11:50 ಗಂಟೆಯ ಮಧ್ಯಾವಧಿಯಲ್ಲಿ ತಮ್ಮ ವಾಸದ ಮನೆಯಿಂದ ಯಾರಿಗೂ ಹೇಳದೆ ಹೊರಗೆ ಹೋದವರು ವಾಪಾಸ್ ಮನೆಗೆ  ಬಾರದೇ ಕಾಣೆಯಾಗಿರುತ್ತಾರೆ.

ಅವರ ಮನೆಯವರು  ಈ ಬಗ್ಗೆ ನೆರೆ ಕೆರೆಯವರಲ್ಲಿ ಹಾಗೂ ಸಂಬಂದಿಕರಲ್ಲಿ ವಿಚಾರಿಸಿದ್ದು  ಪತ್ತೆಯಾಗಿರುವುದಿಲ್ಲ .

ಕಾಣೆಯಾದ ಗಂಡಸಿನ ಚಹರೆ : ಎತ್ತರ: 5 ಅಡಿಬಣ್ಣ:  ಗೋಧಿ ಮೈ ಬಣ್ಣ , ಕಪ್ಪು ಕೂದಲು, ಬಟ್ಟೆ: ನೇರಳೆ ಬಣ್ಣದ  ತುಂಬು ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ದರಿಸಿರುತ್ತಾರೆ.ಭಾಷೆ: ಕನ್ನಡ, ತುಳು, ಇಂಗ್ಲೀಷ್ , ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  34/2024 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ. 

Latest Indian news

Popular Stories