ಕುಂದಾಪುರ: ವಿವಾಹಿತ ಯುವತಿ ನಾಪತ್ತೆ

ಕೊಲ್ಲೂರು: ವಿವಾಹಿತ ಯುವತಿ ರಾತ್ರಿ ಮನೆಯಿಂದ ಕಾಣೆಯಾಗಿರುವ ಕುರಿತು ದೂರು ನೀಡಲಾಗಿದೆ.

ನಾಪತ್ತೆಯಾದವರನ್ನು ಅಪ್ಸಾನಾ (23) ಎಂದು ಗುರುತಿಸಲಾಗಿದ್ದು ಅವರು ಜನವರಿ 30 ರ ರಾತ್ರಿ 11 ಗಂಟೆಗೆ ಕೋಣೆಯಲ್ಲಿ ಮಲಗಿದ್ದರು. ಬೆಳಿಗ್ಗೆ ಎದ್ದು ಅವರ ಅತ್ತೆ ಕೋಣೆಯಲ್ಲಿ ಗಮನಿಸಿದಾಗ ಅವರು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಹಳಷ್ಟು ಹುಡುಕಿದ ನಂತರವೂ ಪತ್ತೆಯಾಗದ ಹಿನ್ನಲೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 09/2024 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories