ಉಡುಪಿ | ವಿಕಸಿತ ಭಾರತ ಯಾತ್ರೆ ಪೂರ್ಣ, ಸಂವಿಧಾನ ಅರಿವು ಜಾಥಾ ಆರಂಭ

ಉಡುಪಿ: ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಗ್ರಾಮದ ಪ್ರತೀ ಫ‌ಲಾನುಭವಿಗಳಿಗೂ ಮುಟ್ಟಿಸುವ ನಿಟ್ಟಿನಲ್ಲಿ ಹಮ್ಮಿಕೊಂ ಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮುಗಿಯುತ್ತಿದ್ದಂತೆ ರಾಜ್ಯ ಸರಕಾರದ ಸಂವಿಧಾನ ಜಾಗೃತಿ ಜಾಥಾ ಗ್ರಾಮಗಳಲ್ಲಿ ಸಂಚಾರ ಆರಂಭಿಸಿದೆ.

ಜಿಲ್ಲಾಡಳಿತ ಅಥವಾ ರಾಜ್ಯ ಸರಕಾರದ ಯಾವುದೇ ಇಲಾಖೆ ಇದರಲ್ಲಿ ನೇರವಾಗಿ ತೊಡಗಿಸಿಕೊಂಡಿಲ್ಲ. ಸ್ಥಳೀಯವಾಗಿ ಕೆಲವು ಗ್ರಾ.ಪಂ. ಪಿಡಿಒಗಳು ಸಹಕಾರ ನೀಡಿದ್ದರು. ಬಿಜೆಪಿ ಬೆಂಬಲಿತರು ಅಧಿಕಾರದಲ್ಲಿರುವ ಗ್ರಾ.ಪಂ.ಗಳಲ್ಲಿ ಕಾರ್ಯ ಕ್ರಮ ಅದ್ದೂರಿಯಾಗಿ ನಡೆದಿತ್ತು. ಇದಕ್ಕೆ ರಾಜ್ಯ ಸರಕಾರ ಯಾವುದೇ ಸಹಕಾರ ನೀಡದಿರುವ ಬಗ್ಗೆ ಬಿಜೆಪಿ ನಾಯಕರು ಬಹಿರಂಗ ಆಕ್ರೋಶ ಹೊರಹಾಕಿದ್ದರು.

ಅರಿವು ಜಾಥಾ ಗಣ್ಯರಾಜ್ಯೋತ್ಸವದಂದು ಎಲ್ಲಜಿಲ್ಲೆಗಳಲ್ಲೂ ರಾಜ್ಯ ಸರಕಾರದ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಗಿದೆ. ಫೆ. 23ರ ವರೆಗೂ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿಸಂಚರಿಸಲಿದೆ. ಸಂವಿಧಾನ ಪೀಠಿಕೆ,ಡಾ| ಬಿ.ಆರ್‌. ಅಂಬೇಡ್ಕರ್‌ ಪರಿಕಲ್ಪನೆಹಾಗೂ ಪುತ್ಥಳಿ, ಬಸವಣ್ಣ ವರವಚನಗಳು, ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿ ಗಳು, ಸಾಹಿತ್ಯ, ಕಲೆ, ಸಂಸ್ಕೃತಿ, ಸರಕಾರದ ಐದುಯೋಜನೆಗಳ ವಿವರ ಇರಲಿದೆ. ಸಂವಿಧಾನ ಜಾಗೃತಿಯ ಕರಪತ್ರ ಗಳನ್ನು ವಿತರಿಸಲಾಗುತ್ತದೆ. ಸಂವಿ ಧಾನ ಕುರಿತು ಉಪನ್ಯಾಸ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಹಾಗೂ
ಭಾಷಣ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ಜಿಲ್ಲಾಡಳಿತದ್ದು. ಪಿಡಿಒಗ ಳನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯದ ಅಧಿಕಾರಿಗಳಿಂದ ಸೂಕ್ತ ಸ್ಪಂದಿನೆ ದೊರಕದೆ ಇದ್ದುದು ಹಾಗೂ ರಾಜ್ಯ ಸರಕಾರ ಇದೀಗ ಸಂವಿಧಾನ ಅರಿವು ಜಾಥಾದ ಜತೆಗೆ ತನ್ನ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೂ ಇದನ್ನೇ ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿ ತರ ಅಧಿಕಾರದ ಗ್ರಾ.ಪಂ.ಗಳಲ್ಲಿ ಸೂಕ್ತ ಸಹಕಾರ ಲಭಿಸುವ ಸಾಧ್ಯತೆ ಇಲ್ಲ ಹಾಗೂ ಬಿಜೆಪಿ ಶಾಸಕರು ಜಾಥಾ ದಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ವಿಕಸಿತ ಭಾರತ ಯಾತ್ರೆ ಪೂರ್ಣ, ಸಂವಿಧಾನ ಅರಿವು ಜಾಥಾ ಆರಂಭ

Latest Indian news

Popular Stories