ಶಿವಮೊಗ್ಗದ ಬುದ್ಧನಗರದಲ್ಲಿ ತಾಯಿ ಇಬ್ಬರು ಮಕ್ಕಳು ನಾಪತ್ತೆ

ಶಿವಮೊಗ್ಗ, ಡಿ.2 : ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ದಾನಗರ 1ನೇ ಕ್ರಾಸ್ ವಾಸಿ ಮೊಹಮದ್ ಜಾಫರ್ ಎಂಬುವವರ ಪತ್ನಿ ಉಮ್ಮೆಹಾನಿ ಎಂಬ 29 ವರ್ಷದ ಮಹಿಳೆ ತಮ್ಮ 09 ವರ್ಷದ ಮಗಳು ಆಸ್ಪಿಯಾ ಕೌನೈನ್ ಹಾಗೂ 05 ವರ್ಷ ಮಗ ಮೊಹಮದ್ ಸುಫಿಯಾನ್ ಎಂಬ ಇಬ್ಬರು ಮಕ್ಕಳನ್ನು ಕರೆದುಕೊಂಡು ನ.20 ರಂದು ಮನೆಯಿಂದ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.

ಉಮ್ಮೆಹಾನಿಯ ಚಹರೆ 5.3 ಅಡಿ ಎತ್ತರ, ದೃಢವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಆಸ್ಪಿಯಾ ಕೌನೈನ್ ಚಹರೆ 4.0 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ಕ್ರೀಂ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಸ್ಕರ್ಟ್ ಧರಿಸಿರುತ್ತಾಳೆ. ಮೊಹಮದ್ ಸೂಫಿಯಾನ್ ಚಹರೆ 3.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ಕ್ರೀಂ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಚಡ್ಡು ಧರಿಸಿರುತ್ತಾನೆ.

ಈ ಕಾಣೆಯಾದ ವ್ಯಕ್ತಿಗಳ ಮಾಹಿತಿ ದೊರೆತಲ್ಲಿ ದೊಡ್ಡಪೇಟೆ ಪೆÇಲೀಸ್ ಠಾಣೆ ಸಂಖ್ಯೆ : 08182-261414/9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Latest Indian news

Popular Stories