ಪೌರತ್ವ ಕಾಯ್ದೆಯ 2009ರ ನಿಯಮಗಳ ಆಧಾರದಲ್ಲಿ ಸರ್ಕಾರದ ಅಧಿಸೂಚನೆ, ಸಿಎಎ ಪ್ರತಿಭಟನೆಗೆ ಮಣಿದ ಸರ್ಕಾರ?

2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಅಡಿಯಲ್ಲಿ ನಿಯಮಗಳಿಗೆ ಅಂತಿಮ ರೂಪರೇಷ ನೀಡದಿದ್ದರೂ ಸಹ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ 1955 ಕ್ಕೆ 2009ರ ಕಾನೂನಿನಡಿಯಲ್ಲಿ ರೂಪಿಸಲಾದ ನಿಯಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ.

ಈ ಅಧಿಸೂಚನೆಯ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದು ಭಾರತದ ಗುಜರಾತ್, ರಾಜಸ್ಥಾನ, ಛತ್ತೀಸ್ಗಡ, ಹರ್ಯಾಣ ಮತ್ತು ಪಂಜಾಬ್ ರಾಜ್ಯದ 13 ಜಿಲ್ಲೆಗಳಲ್ಲಿ ನೆಲೆಸಿರುವ ಸಿಖ್, ಬೌದ್ಧ, ಹಿಂದು ಮತ್ತು ಜೈನ ಧರ್ಮ ಬಾಂಧವರು ಭಾರತೀಯ ನಾಗರಿಕತೆಗೆ ಅರ್ಜಿ ಸಲ್ಲಿಸಬಹುದು.

2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಅಡಿಯಲ್ಲಿ ರೂಪಿಸಲಾದ ನಿಯಮಗಳ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳದಿದ್ದರೂ ಈ ನಿರ್ಧಾರ ಕೈಗೊಂಡಿರುವುದು ಆಶ್ಚರ್ಯ ಚಕಿತಗೊಳಿಸಿದೆ. ಈ ಕಾಯ್ದೆಯ ವಿರುದ್ಧ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು, ಈ ಪ್ರತಿಭಟನೆಯ ನಂತರ ನೂರಾರು ಸಾಮಾಜಿಕ ಕಾರ್ಯಕರ್ತರನ್ನು ದೆಹಲಿ ಹಿಂಸಾಚಾರದ ಆರೋಪದಲ್ಲಿ ಬಂಧಿಸಲಾಗಿದೆ.

2014 ಡಿಸೆಂಬರ್ ಒಳಗೆ ಮುಸ್ಲಿಮರನ್ನು ಹೊರತುಪಡಿಸಿ ಬೇರೆಲ್ಲ ಧರ್ಮಕ್ಕೆ ಸೇರಿದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ನಾಗರಿಕರು ಭಾರತಕ್ಕೆ ಬಂದಿದ್ದರೆ ಅವರಿಗೆ ಭಾರತೀಯ ನಾಗರೀಕತೆ ಕೊಡಲಾಗುತ್ತದೆ ಅಥವಾ ಪಡೆಯಬಹುದು ಎಂಬುದು 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಅಡಿಯಲ್ಲಿ ತಿದ್ದುಪಡಿಮಾಡಲಾಗಿತ್ತು. ಈ ಹೊಸ ನಿಯಮಗಳಿಗೆ ಅಂತಿಮ ರೂಪರೇಷ ನೀಡದಿರುವುದು ಸರ್ಕಾರ ಪ್ರತಿಭಟನೆಗಳಿಗೆ ಬಗ್ಗಿದೆ ಎಂಬುದನ್ನೇ ಬಿಂಬಿಸುತ್ತದೆ.

Latest Indian news

Popular Stories