
Crime
ರಾಜಸ್ಥಾನ್ :ಬಸ್-ಟ್ರಕ್ ಅಪಘಾತ: ನಾಲ್ಕು ಪ್ರಯಾಣಿಕರು ಮೃತ್ಯು , 20 ಜನರಿಗೆ ಗಾಯ
ಜೈಪುರ: ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಲ್ಲಿ ಶನಿವಾರ ಬಸ್-ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನಾಲ್ಕು ಮಂದಿ ಮೃತಪಟ್ಟು, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಾಲಯಕ್ಕೆ ಹೋಗಿದ್ದವರು ಹಿಂದಿರುಗುವ ವೇಳೆ ಈ ಅಪಘಾತ ಸಂಭವಿಸಿದೆ.ಈ ಬಸ್ ಪ್ರತಾಪಗಢ-ಬನ್‌ಸ್ವಾರ ಹೆದ್ದಾರಿಯಲ್ಲಿ ಕಚೋಟಿಯಾನ್ ಗ್ರಾಮದ ಸಮಿಪ ಸಂಚರಿಸುತ್ತಿದ್ದಾಗ ನಿಂತಿದ್ದ ಟ್ರಕ್‌ಗೆ ಡಿಕ್ಕಿಯಾಗಿದೆ ಎಂದು ಸುಹಾಗ್ಪುರ ಠಾಣಾಧಿಕಾರಿ ಇಂದ್ರಜಿತ್ ಮಾಹಿತಿ ನೀಡಿದ್ದಾರೆ.ಗಾಯಗೊಂಡಿರುವ 20 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ.




