ಉಡುಪಿ: ಪ್ರತ್ಯೇಕ ಪ್ರಕರಣ – 19 ವರ್ಷದ ಯುವಕ‌ ಸೇರಿ ಇಬ್ಬರು ನಾಪತ್ತೆ

ಉಡುಪಿ: ಫಿರ್ಯಾದಿ ಯಲ್ಲವ್ವ ಕುಚಲ(50), ಗುಲೇದಗುಡ್ಡ ತಾಲೂಕು, ಬಾಗಲಕೋಟೆ ಇವರ ಮಗ ವಿನೋದ ಕೂಚಲ (19) ಈತನು ಉಡುಪಿಯ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿರುವ ತನ್ನ ಬಾಡಿಗೆ ಮನೆಯಿಂದ ದಿನಾಂಕ 08/02/2024 ರಂದು ಬೆಳಿಗ್ಗೆ ಸಮಯ 05:00 ಗಂಟೆಗೆ ಎದ್ದು ತನ್ನ ಸ್ನೇಹಿತನ ಮನೆಗೆ ಹೋಗುವುದಾಗಿ ತನ್ನ ದೊಡ್ಡಪ್ಪನಿಗೆ ತಿಳಿಸಿ ಹೋದವನು ಈವರೆಗೂ ಊರಿಗೂ ಬಾರದೇ, ನಿಟ್ಟೂರಿನ ಮನೆಗೂ ವಾಪಸು ಬಾರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2024, ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಜೆಕಾರು: ಪಿರ್ಯಾದಿ ಶ್ರೀಧರ (84)  ಕಾಡುಹೊಳೆ, ಮರ್ಣೆ ಗ್ರಾಮ, ಕಾರ್ಕಳ ಇವರ ಕಿರಿಯ ಮಗನಾದ ಸತ್ಯಈಶ (46) ಅವಿವಾಹಿತನಾಗಿದ್ದು, ಕಳೆದ 17 ವರ್ಷಗಳಿಂದ ಬೆಂಗಳೂರಿನ ಟೊಯೋಟಾ ಶೋ ರೂಂ ನಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದು, ವರ್ಷಕ್ಕೆ ಒಂದೆರಡು ಬಾರಿ ಊರಿಗೆ ಬಂದು ಹೋಗುತ್ತಿರುವುದಾಗಿದೆ. ಕಳೆದ ಕೋವಿಡ್ ಲಾಕಡೌನ್ ಸಮಯದಲ್ಲಿ ಮನೆಗೆ ಬಂದವನು 3 ವರ್ಷಗಳಿಂದ ಮನೆಯಲ್ಲೇ ಇದ್ದವನು 3 ತಿಂಗಳ ಹಿಂದೆ ನವೆಂಬರ್ 7 ನೇ ತಾರೀಕಿನಂದು ಮನೆಯಿಂದ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ತೆರಳುತ್ತೇನೆಂದು ಹೋದವನು ಈವರೆಗೆ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ತೆರಳದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2024 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories