Udupi | ಗರ್ಭಿಣೆ ಮಹಿಳೆಯ ರಕ್ಷಣೆ.

ಉಡುಪಿ, ಫೆ.13; ಚಲಿಸುತ್ತಿರುವ ರೈಲಿನಲ್ಲಿ ಅತೀಯಾದ ಉದರ ಬೇನೆಯಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಯನ್ನು ರಕ್ಷಿಸಿರುವ ಘಟನೆಯು ಸೋಮವಾರ ರಾತ್ರಿ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಡೆದಿದೆ.

ದೆಹಲಿಯಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿ ಮಹಿಳೆಯೊರ್ವರಿಗೆ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಂಡಿತು. ಗರ್ಭಿಣಿ ಅಸಹಾಯಕ ಪರಿಸ್ಥಿತಿಯಲ್ಲಿದ್ದರು.

ಇಂದ್ರಾಳಿ ನಿಲ್ದಾಣದಲ್ಲಿ ರೈಲು ನಿಲುಗಡೆ ಪಡೆದಾಗ, ರೈಲ್ವೆ ಮುಖ್ಯ ಆರೋಗ್ಯಾಧಿಕಾರಿ ಸ್ಟಿವನ್ ಜಾರ್ಜ್ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡುವರು ಗರ್ಭಿಣಿ ಮಹಿಳೆಯನ್ನು ಸರಕಾರಿ ಮಹಿಳಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲುಪಡಿಸಿದರು. ಮಹಿಳೆಯ ಜೊತೆ ಪತಿ ಇದ್ದರು, ಕೇರಳ ಮೂಲದವರೆಂದು ತಿಳಿದುಬಂದಿದೆ.

Latest Indian news

Popular Stories