ಉಡುಪಿ | ಮನನೊಂದ ಯುವತಿಯ ರಕ್ಷಣೆ: ಸೂಚನೆ

ಉಡುಪಿ, ಮಾ.11, ಕಾಪು ಠಾಣಾ ವ್ಯಾಪ್ತಿಯ ಕೊಪ್ಪಲಂಗಡಿಯಲ್ಲಿ ಮನನೊಂದ ಅಸಹಾಯಕ ಯುವತಿಯೊಬ್ಬಳು ಅಮಾನವೀಯ ಸ್ಥಿತಿಯಲ್ಲಿ ಬೀದಿ ಬದಿ ಇದ್ದವಳನ್ನು ವಿಶು ಶೆಟ್ಟಿಯವರು ಕಾಪು ಪೊಲೀಸರ ಸಹಾಯದಿಂದ ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿದ ಘಟನೆ ನಡೆದಿದೆ.

ಯುವತಿ ಮಂಜುಳಾದೇವಿ(21) ಬಿಹಾರ ಮೂಲದವಳಾಗಿದ್ದು, ಹೆಚ್ಚಿನ ವಿವರ ನೀಡುತ್ತಿಲ್ಲ. ಮನಸ್ಸಿಗೆ ಆದ ಆಘಾತದಿಂದ ಬೀದಿಪಾಲಾಗಿದ್ದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಸಂಬಂಧಪಟ್ಟವರು ಇದ್ದಲ್ಲಿ ಸಖಿ ಸೆಂಟರ್ ಅಥವಾ ಕಾಪು ಪೊಲೀಸ್ ಠಾಣೆ ಸಂಪರ್ಕಿಸಲು ವಿಶು ಶೆಟ್ಟಿ ವಿನಂತಿಸಿದ್ದಾರೆ.

Latest Indian news

Popular Stories