ಉಡುಪಿ: ಪ್ರತ್ಯೇಕ ಪ್ರಕರಣ – ಇಂಜಿನಿಯರ್ ಸೇರಿ ಇಬ್ಬರು ನಾಪತ್ತೆ

ಉಡುಪಿ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ.

ಪ್ರಕರಣ ೧:
ಶಂಕರನಾರಾಯಣ: ಕೇರಳ ಮೂಲದ ಜೋನಿ ಸೆಬಸ್ಟೀನ್ (49) ಎಸ್ಟೇಟ್ ನ ಕೆಲಸಕ್ಕೆ ಬಂದಿದ್ದು ಎಸ್ಟೇಟ್ ನ ಒಮಿನಿಯನ್ನು ಹೇಳದೆ ಕೇಳದೆ ತೆಗೆದುಕೊಂಡು ಡ್ರೈವಿಂಗ್ ಮಾಡಿಕೊಂಡು ಹೋಗುವುದನ್ನು ಮಾಲೀಕ ಕಂಡು ಇದು ಸರಿಯಲ್ಲ ನಿಮಗೆ ಡ್ರೈವಿಂಗ್ ಲೆಸೆನ್ಸ್ ಇಲ್ಲ ಎಂದು ಹೇಳಿದಕ್ಕೆ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿ ದಿನಾಂಕ 05/02/2024 ರಂದು ಬೆಳಿಗ್ಗೆ ಜಾವ 02:30 ಘಂಟೆಗೆ ಹೊಟೇಲ್ ಕೆಲಸಕ್ಕೆ ಬೇರೆ ಕಡೆ ಹೋಗುತ್ತೇನೆ ಎಂದು ಹೇಳಿ ಹೋದವನು ತನ್ನ ಮನೆಗೆ ಹೋಗದೆ ಬೇರೆ ಕಡೆ ಹೊಟೇಲ್ ಕೆಲಸಕ್ಕೂ ಹೋಗದೆ ವಾಪಸ್ಸುಎಸ್ಟೇಟ್ ಕೆಲಸಕ್ಕೂ ಬಾರದೆ ಕಾಣೆಯಾಗಿದ್ದಾನೆ.

ಈ ತನಕ ಎಲ್ಲ ಕಡೆ ಹುಡುಕಾಡಿದರು ಪತ್ತೆಗೆ ಪ್ರಯತ್ನಿಸಿದರೂ ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2024 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ ೨:

ಹೆಬ್ರಿ: ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿ ಕೆಲಸದ ಹುಡುಕಾಟದಲ್ಲಿದ್ದ ಆಕಾಶ್ ಎಸ್ (26) ಇವರು ನಾಪತ್ತೆಯಾಗಿದ್ದಾರೆ.

ದಿನಾಂಕ 10/02/2024 ರಂದು ಸಂಜೆ ಸಮಯ ಸುಮಾರು 06:30 ಗಂಟೆಗೆ KA-20 R-477 ನೇ ಮೋಟರ್‌ ಸೈಕಲ್‌ ನ್ನು ತೆಗೆದುಕೊಂಡು ಹೆಬ್ರಿ ಪೆಟೆ ಕಡೆಗೆ ಹೋದವರು ಇಲ್ಲಿಯವರೆಗೆ ವಾಪಾಸು ಮನೆಗೆ ಬಂದಿರುವುದಿಲ್ಲ .

ಪೋನ್‌ ಕಾಲ್‌ ಮಾಡಿದರೂ ಆತನ ಪೋನ್‌ ಸ್ವೀಚ್‌ ಆಪ್‌ ಇರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2024 ಕಲಂ: ಮನಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories