CrimeDakshina Kannada

ಉಳ್ಳಾಲ: ಸಮುದ್ರಕ್ಕೆ ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಮಂಗಳೂರು: ಸಮುದ್ರಕ್ಕೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ.

IMG 20231210 WA0007 Crime, Dakshina Kannada

ಸೋಮೇಶ್ವರ ಖಾಸಗಿ ಕಾಲೇಜಿನ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಯಶ್ವಿತ್(17) ಹಾಗೂ ಯುವರಾಜ್(17) ಸಮುದ್ರ ಪಾಲಾದ ವಿದ್ಯಾರ್ಥಿಗಳು.

ಕಾಲೇಜಿನಿಂದ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದರು.

ಬಳಿಕ ಆರು ಮಂದಿಯೂ ಸಮದ್ರದಲ್ಲಿ ಆಟವಾಡಲು ಇಳಿದಿದ್ದಾರೆ. ಈ ವೇಳೆ ಯಶ್ವಿತ್ ಮತ್ತು ಯುವರಾಜ್ ಕಡಲಿನ ಅಲೆಗಳಿಗೆ ಸಿಲುಕಿ ಸಮುದ್ರಪಾಲಾಗಿದ್ದಾರೆ. ಉಳಿದ ನಾಲ್ವರು ವಿದ್ಯಾರ್ಥಿಗಳು ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಈಜು ತಜ್ಞರು ಭೇಟಿ ನೀಡಿದ್ದು ನೀರು ಪಾಲಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನೀರುಪಾಲಾದ ವಿದ್ಯಾರ್ಥಿಗಳಿಬ್ಬರೂ ಮಂಜೇಶ್ವರ ಮೂಲದವರೆಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button