ಬ್ರಹ್ಮಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶ್ಲಾಘನೀಯ – ಯುಎಸ್.ವಾಹೀದ್ ದಾವೂದ್ ಉದ್ಯಾವರ

ಹೊನ್ನಾಳ: ಬ್ರಹ್ಮಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಮ್ಮ ನಾಡು ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾದ ಎಸ್.ವಾಹೀದ್ ದಾವೂದ್ ಉದ್ಯಾವರ ಮಾತನಾಡಿ, ಪ್ರತಿಭಾ ಕಾರಂಜಿಯ ಮುಖಾಂತರ ಮಕ್ಕಳಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಶ್ಲಾಘನೀಯ ಎಂದರು.

IMG 20230911 WA0055 1 Crime

ನಾನು ಈ ಮಕ್ಕಳಲ್ಲಿ ನನ್ನನ್ನು ಕಾಣುತ್ತೇನೆ. ಮಕ್ಕಳ ಪ್ರತಿಭೆ ಗುರುತಿಸುವುದು ಅವಶ್ಯಕ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟಕರವಾಗಿತ್ತು. ಇದೀಗ ಶಿಕ್ಷಣ ಪಡೆಯಲು ಎಲ್ಲ ವ್ಯವಸ್ಥೆ ಇದೆ. ಎಲ್ಲರೂ ಶ್ರೈಕ್ಷಣಿಕವಾಗಿ ಮುಂದುವರೆಯಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ನಂತರ ಶಾಲಾ ಮಕ್ಕಳ ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳು ನಡೆದವು.

Latest Indian news

Popular Stories