ಸೂರ್ಯಕಾಂತ್ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಯಾಕೆ ?
ಬೀದರ್: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಅವರಿಗೆ ಬಸವಕಲ್ಯಾಣ ಉಪಚುನಾವಣೆಯ ಟಿಕೆಟ್ ಯಾಕೆ ಸಿಗಲಿಲ್ಲ ?
ಎರಡು ಬಾರಿ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಬಸವಕಲ್ಯಾಣದ ಟಿಕೆಟ್ ಕೇಳಿದ್ದಾದರೂ ಯಾಕೆ ?
ಬಸವಕಲ್ಯಾಣದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಮೇಲಿನ ಎರಡು ಪ್ರಶ್ನೆಗಳು ಬಿಜೆಪಿ ಕಾರ್ಯಕರ್ತರನ್ನು ಕಾಡಲಾರಂಭಿಸಿವೆ.
ಸೂರ್ಯಕಾAತ ನಾಗಮಾರಪಳ್ಳಿ ಅವರು ಉತ್ಸಾಹಿ ಯುವ ಮುಖಂಡರು. ಅದ್ಭುತ ಮಾತುಗಾರ. ಆಕರ್ಷಕ ವ್ಯಕ್ತಿತ್ವ. ಉದಾರವಾಗಿ ಖರ್ಚು ಮಾಡುವ ಮನಸ್ಸು. ಇವೆಲ್ಲ ಕಾರಣಗಳಿಂದಾಗಿ ಹೋದಲ್ಲಿ, ಬಂದಲ್ಲಿ ಕಾರ್ಯಕರ್ತರ, ಬೆಂಬಲಿಗರ ದಂಡು.
ಸೂರ್ಯಕಾAತ್ ನಾಗಮಾರಪಳ್ಳಿ ಅವರು ಬೀದರ್ ಉತ್ತರ ವಿಧಾನಸಭಾ ಕ್ಷೇತ್ರವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡವರು. ಎರಡು ಬಾರಿ ಸ್ಪರ್ಧಿಸಿದ್ದಾರೆ. ಕಾರ್ಯಕರ್ತರ ಭೇಟಿ, ಸಭೆ ಸಮಾರಂಭಗಳಲ್ಲಿ ಭಾಗಿಯಾಗುವುದು ಹೀಗೆ ಕ್ಷೇತ್ರದ ನಂಟು ಉತ್ತಮವಾಗಿಯೇ ಇದೆ. ಸ್ಪರ್ಧಿಸಿದ ಎರಡೂ ಚುನಾವಣೆಗಳಲ್ಲೂ ಪಡೆದ ಮತಗಳೂ ಹೆಚ್ಚಿವೆ. ಜೊತೆಗೆ ಮುಂದಿನ ಚುನಾವಣೆಯಲ್ಲೂ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಟಿಕೆಟ್ಗೆ ಸಂಬAಧಿಸಿದAತೆ ಸುರಕ್ಷಿತ ಎನ್ನುವಂತಹ ಸ್ಥಿತಿ ಇದೆ.
ಹೀಗಿದ್ದ ನಂತರವೂ ಬಸವಕಲ್ಯಾಣ ಕ್ಷೇತ್ರದತ್ತ ಸೂರ್ಯಕಾಂತ್ ಯಾಕೆ ಮುಖ ಮಾಡಿದರು ?, ಅಲ್ಲೂ ಬಿಜೆಪಿ ಇದೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮುಖಂಡರಿದ್ದರು. ಮಾಜಿ ಶಾಸಕರಿದ್ದಾರೆ. ಟಿಕೆಟ್ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿದ್ದ ನಾಯಕರಿದ್ದಾರೆ. ಅದೇನು ಖಾಲಿ ಮನೆಯಂತಿರಲಿಲ್ಲ.
ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಕಷ್ಟಕರ ಎನ್ನುವುದು ಸೂರ್ಯಕಾಂತ್ ಬೆಂಬಲಿಗರಿಗೆ ಮನದಟ್ಟಾಗಿರಬಹುದು. ಎರಡು ಚುನಾವಣೆಗಳ ಸೋಲು ಕಂಗೆಡಿಸಿರಬಹುದು. ಆದರೆ, ಸೋಲಿಗೆ ಕಾರಣವಾದ ಅಂಶಗಳನ್ನು ತಿಳಿದುಕೊಂಡು, ಸರಿಪಡಿಸುವ ಬದಲು, ದೂರದ ಬಸವಕಲ್ಯಾಣದತ್ತ ಹೋಗಲು ಮನಸ್ಸು ಮಾಡಿದ್ದು ಸರಿಯೇ ಎನ್ನುವುದು ಮೊದಲ ಪ್ರಶ್ನೆ.
ಬಸವಕಲ್ಯಾಣ ಅಭ್ಯರ್ಥಿ ಆಯ್ಕೆಗೆ ಬೆಂಗಳೂರಿನಲ್ಲಿ ನಡೆದ ಪ್ರಮುಖರ ಸಭೆಯಲ್ಲಿಯೇ ಸಚಿವರೊಬ್ಬರು, ಸೂರ್ಯಕಾಂತ ನಾಗಮಾರಪಳ್ಳಿ ಬೇಡಿಕೆಗೆ ಅಪಸ್ವರ ಎತ್ತಿದ್ದರಂತೆ. ಬೀದರ್ ಇದ್ದ ಮೇಲೆ ಬಸವಕಲ್ಯಾಣ ಯಾಕೆ ಎಂದೂ ಪ್ರಶ್ನಿಸಿದ್ದರಂತೆ. ಇತರ ಕೆಲ ಮುಖಂಡರೂ ಪರೋಕ್ಷವಾಗಿ ಸೂರ್ಯಕಾಂತ್ ದಾವೇದಾರಿಕೆಯನ್ನು ಪ್ರಶ್ನಿಸಿದ್ದರು. ಇದೆಲ್ಲ ನಡೆದಿದ್ದು ಸಾಕಷ್ಟು ದಿನಗಳ ಹಿಂದೆ. ಈ ಬೆಳವಣಿಗೆಯ ನಂತರವಾದರೂ ಸೂರ್ಯಕಾಂತ್ ಯಾಕೆ ಹಿಂದಕ್ಕೆ ಸರಿಯಲಿಲ್ಲ ಎನ್ನುವುದು ಎರಡನೇ ಪ್ರಶ್ನೆ.
ಇವೆಲ್ಲವುಗಳ ಜೊತೆಗೆ ಎಲ್ಲಕ್ಕೂ ಮುಖ್ಯವಾದ ಸಂಗತಿ ಎಂದರೆ, ಜಿಲ್ಲೆಗ ಬರುವ ಸಚಿವರೊಂದಿಗೆ ಓಡಾಡಿದ್ದು. ಸಚಿವರೊಂದಿಗೆ ಸೂರ್ಯಕಾಂತ್ ಆಪ್ತ ಸಂಬAಧ ಹೊಂದಿರಬಹುದು. ಆದರೆ, ಶಿಷ್ಟಾಚಾರ ಪಾಲಿಸಬೇಕು ಎಂದು ಇತರೆ ಮುಖಂಡರು ಆಪೇಕ್ಷಿಸುವುದು ಸಹಜ. ಸೂರ್ಯಕಾಂತ್ ಅವರ ಈ ನಡೆ, ಬಿಜೆಪಿ ಹಿರಿಯ ಮುಖಂಡರಿಗೆ ಬೇಸರವುಂಟು ಮಾಡಿದ್ದು ವಾಸ್ತವ.
ಇನ್ನು ಬಸವಕಲ್ಯಾಣ ಟಿಕೆಟ್ಗೆ ಸಂಬAಧಿಸಿದAತೆ ಸೂರ್ಯಕಾಂತ್ ಪರವಾಗಿ ಮಾತನಾಡಿದ ಮುಖಂಡರು ಜಿಲ್ಲೆಯಲ್ಲಿ ಯಾರಿದ್ದಾರೆ ಎನ್ನುವ ಪ್ರಶ್ನೆಯೂ ಇದೆ. ಸಂಸದ ಭಗವಂತ ಖೂಬಾ ಸೇರಿದಂತೆ ಜಿಲ್ಲೆಯ ಯಾವುದೇ ಮುಖಂಡರು ಸೂರ್ಯಕಾಂತ್ ಪರವಾಗಿರಲಿಲ್ಲ. ಆಪ್ತರೊಂದಿಗಿನ ಮಾತುಕತೆ ವೇಳೆ ಹಲವು ಮುಖಂಡರು ಸೂರ್ಯಕಾಂತ್ ಬೇಡಿಕೆ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಸೂರ್ಯಕಾಂತ್ ಬಸವಕಲ್ಯಾಣ ಟಿಕೆಟ್ ಯಾಕೆ ಕೇಳುತ್ತಿದ್ದಾರೆ ಎಂದೂ ಕೆಲವರು ಬೇಸರದಿಂದ ಪ್ರಶ್ನಿಸಿದ್ದರು.
ಯಡಿಯೂರಪ್ಪ, ವಿಜಯೇಂದ್ರ ಆಪ್ತರಾಗಿರಬಹುದು. ಆದರೆ, ಅದೊಂದೇ ಕಾರಣಕ್ಕೆ ಟಿಕೆಟ್ ಸಿಗಬಹುದಾದ ಸ್ಥಿತಿ ಬಿಜೆಪಿಯಲ್ಲಿ ಇಲ್ಲ. ಮುಖಂಡರು ಹೇಳಿದವರಿಗೆಲ್ಲ ಟಿಕೆಟ್ ನೀಡುವ ಸ್ಥಿತಿ ಇದ್ದಿದ್ದಲ್ಲಿ ಬಿಜೆಪಿ ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ. ಜೊತೆಗೆ ಎಲ್ಲಕ್ಕೂ ಮುಖ್ಯವಾಗಿರುವುದು ಹೊಸ ಪ್ರಯೋಗಗಳಲ್ಲಿ ಆ ಪಕ್ಷದ ನಾಯಕತ್ವಕ್ಕೆ ಇರುವ ಆಸಕ್ತಿ.
ಅಭ್ಯರ್ಥಿ ಆಯ್ಕೆಯಂತಹ ಅತ್ಯಂತ ಮಹತ್ವದ ತೀರ್ಮಾನವನ್ನು ಕೈಗೊಳ್ಳುವಾಗ ಯಾರೇ ಒಬ್ಬ ನಾಯಕರ ಅಭಿಪ್ರಾಯವನ್ನು ಮನ್ನಿಸುವಷ್ಟು ದುರ್ಬಲ ನಾಯಕತ್ವ ಬಿಜೆಪಿಯಲ್ಲಿ ಇಲ್ಲ. ಅಳೆದೂತೂಗಿ ನೋಡಿಯೇ ತೀರ್ಮಾನ ಕೈಗೊಳ್ಳುವ ಪರಂಪರೆ ಬಿಜೆಪಿಯಲ್ಲಿದೆ. ನಾಯಕತ್ವಕ್ಕೆ ಶೇ. 100 ರಷ್ಟು ಮನವರಿಕೆ ಆದರಷ್ಟೇ ಮುಖಂಡರ ಮಾತಿಗೆ ಮನ್ನಣೆ ಸಿಗುತ್ತದೆ. ಸ್ವಲ್ಪವೂ ಅನುಮಾನ ಕಾಡಿದ್ದಲ್ಲಿ ನಾಯಕತ್ವವು ಪರ್ಯಾಯ ಆಯ್ಕೆಗಳ ಬಗ್ಗೆ ಚಿಂತನೆ ನಡೆಸುತ್ತದೆ. ಪರ್ಯಾಯ ಆಯ್ಕೆಗಳಲ್ಲಿ ಯಾವುದು ಉತ್ತಮ ಎನ್ನುವುದನ್ನು ಅಧ್ಯಯನದ ನಂತರವೇ ತೀರ್ಮಾನಿಸುತ್ತದೆ. ಬಸವಕಲ್ಯಾಣ ಅಭ್ಯರ್ಥಿ ಆಯ್ಕೆ ಇದಕ್ಕೊಂದು ಉದಾಹರಣೆ.





Very Good decesion.inform all the leaders to work together & give a + result.