
ಅಳಿವಿನಂಚಿನಲ್ಲಿರುವ ಗುಬ್ಬಿ ಸಂತತಿಯನ್ನು ಮುಂದಿನ ಪೀಳಿಗೆಗೂ ಉಳಿಸಿ ತಮಿಳು ಯೂತ್ ಫೆಡರೇಷನ್ ನಿಂದ ವಿಶ್ವ ಗುಬ್ಬಿ ದಿನ
ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ. ಗುಬ್ಬಚ್ಚಿ ಉಳಿದರೆ ಮಾತ್ರ ಉತ್ತಮ ಪರಿಸರ ಉಳಿಸಲು ಸಾಧ್ಯ. ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ ಎಂದು ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ಹಾಗೂ ಸತ್ವಹಿತ ಹೋಂಸ್ಟೇನ ಸಿ.ಎಸ್. ಮುರುಳೀಧರ ಸಲಹೆ ನೀಡಿದ್ದಾರೆ.
ಕೊಡಗು ತಮಿಳು ಯೂತ್ ಫೆಡರೇಷನ್ ವತಿಯಿಂದ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಕೃಷಿಗೆ ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿಯಾಗಿದ್ದು, ಗುಬ್ಬಿಗಳು ಸಾವನಪ್ಪುತ್ತಿದೆ.
ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿವು. ಮನುಷ್ಯರು ನಾವು ಮಾತ್ರ ಬದುಕದೆ, ಎಲ್ಲಾ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಪೆÇನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಎಂ.ಎಸ್ಸಿ ಫಾರೆಸ್ಟ್ರಿ ವಿದ್ಯಾರ್ಥಿ ಹಾಗೂ ವೆಸ್ಟರ್ನ್ ಘಾಟ್ ನೇಚರ್ ಫೆಡರೇಷನ್ ನ ಸ್ವಯಂ ಸೇವಕರಾದ ಆಕಾಶ್ ಮಾತನಾಡಿ ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಬೇಧವಿದೆ.
ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದೆ. ಮನುಷ್ಯನಿಂದ ಗುಬ್ಬಿಗೆ ಕಂಟಕ ಎದುರಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ಮನೆಗಳು ಹೆಚ್ಚಾಗುತ್ತಿದೆ. ಇದರಿಂದ ಗುಬ್ಬಿಗೆ ಗೂಡುಕಟ್ಟಲು ಕಷ್ಟವಾಗಿದೆ.
ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಗುಬ್ಬಿ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣ. ಗುಬ್ಬಿಯ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಛಾಯಾಗ್ರಹಕ ಶ್ರೀನಿವಾಸ್ ಶಾಮಾಚಾರ್ ಮಾತನಾಡಿ ಬೆಂಗಳೂರಿನಲ್ಲಿ ಗುಬ್ಬಿ ಕಾಣಲು ಸಿಗುತ್ತಿಲ್ಲ. ಆದರೆ ನಮ್ಮ ಬಾಲ್ಯವನ್ನು ನೆನಪಿಡಿಸಿಕೊಂಡರೆ ಗುಬ್ಬಚ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.
ಆದರೆ ಇಂದು ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿ ಸಂಕುಲ ಅವಸಾನದಂಚಿನಲ್ಲಿದೆ ಎಂದರು.
ಸಿದ್ದಾಪುರ ಜಿಎಂಪಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ ಮಾತನಾಡಿ 2010ರಿಂದ ಪ್ರತಿ ವರ್ಷ ಮಾ.20ರಂದು ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ.
ಪಕ್ಷಿ ಸಂಕುಲವನ್ನು ಉಳಿಸಲು ಮಕ್ಕಳು ಮುಂದಾಗಬೇಕೆಂದು ಸಲಹೆ ನೀಡಿದರು.
ಕೊಡಗು ತಮಿಳು ಯೂತ್ ಫೆಡರೇಷನ್ ನ ಅಧ್ಯಕ್ಷ ರವಿ ಮಾತನಾಡಿ ನಾವು ಗುಬ್ಬಚ್ಚಿ ದಿನವನ್ನು ಮೊದಲ ಬಾರಿಗೆ ಆಚರಿಸುತ್ತಿದ್ದೇವೆ.
ಪಕ್ಷಿ ಸಂತತಿ ಅಳಿವಿನಂಚಿನಲ್ಲಿದ್ದು, ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿ ಪ್ರಮುಖರಾದ ಸರೇಶ್ ಬಿಳಿಗೇರಿ ಮಾತನಾಡಿದರು.
ಗುಬ್ಬಚ್ಚಿ ದಿನ ಪ್ರಯುಕ್ತ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಲಯನ್ಸ್ ನರ್ಸರಿ ಹಾಗೂ ಪ್ರಾಥಮಿಕ ಶಾಲೆಯ ಡೆರಿನ್ ಬ್ರೋನ್ ಸೈಮನ್ ಪ್ರಥಮ , ಪಿ.ಎಸ್.
ಶಾಶ್ವತ್ಥ್ ದ್ವಿತೀಯ ಹಾಗೂ ದಿಶಾ ಚೆಂಗಪ್ಪ ತೃತೀಯ ಸ್ಥಾನ ಹಾಗೂ ಕವನ ಸ್ಪರ್ಧೆಯಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿಘ್ನೇಶ್(ಪ್ರಥಮ).
ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾವತಿ ಅವರಿಗೆ ದ್ವಿತೀಯ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೆಸ್ಟರ್ನ್ ಘಾಟ್ ನೇಚರ್ ಫೌಂಡೇಶನ್ ನಿಂದ ಸಿದ್ದಾಪುರ ಜಿಎಂಪಿ ಶಾಲೆಗೆ ಗುಬ್ಬಚ್ಚಿ ಗೂಡನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪೆÇನ್ನಂಪೇಟೆ ಅರಣ್ಯ ಕಾಲೇಜಿನ ಎಂ.ಎಸ್ಸಿ. ಫಾರೆಸ್ಟ್ರಿ ವಿದ್ಯಾರ್ಥಿ ಸೈಯದ್ ಅಲಿ, ಕೊಡಗು ತಮಿಳು ಯೂತ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಪದಾಧಿಕಾರಿಗಳಾದ ಹರೀಶ್, ಶಶಿ, ಸೆಲ್ವಂ, ಸುಧಾಕರ್, ವಿಘ್ನೇಶ್ ಮತ್ತಿತರರು ಹಾಜರಿದ್ದರು.




