ಕಡಬ: ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿದ ಅಪರಿಚಿತ

ಮಂಗಳೂರು: ಶಾಲಾ ವಠಾರದಲ್ಲಿ ಪರೀಕ್ಷೆ ತಯಾರಿಯಲ್ಲಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಅಪರಿಚಿತನೊಬ್ಬ ಆ್ಯಸಿಡ್ ಎರಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ ನಡೆದಿದೆ.

ಕಡಬ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಲೀನಾ ಸಿಬಿ,ಅರ್ಚನಾ ಮತ್ತು ಅಮೃತಾ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

ಆ್ಯಸಿಡ್ ಎರಚಿದಾತ ಮುಖ, ತಲೆ ಮುಚ್ಚಿ ಈ ಕೃತ್ಯ ಎಸಗಿದ್ದು, ಈ ಹಿನ್ನೆಲೆಯಲ್ಲಿ ಗುರುತು ಪತ್ತೆಯಾಗಿಲ್ಲ.
ಕಡಬದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Latest Indian news

Popular Stories