Manglore: 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

ಮಂಗಳೂರು: ದುಬಾೖಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 5ರಂದು ಆಗಮಿಸಿದ ಪ್ರಯಾಣಿಕನೊಬ್ಬನಿಂದ ಕಳ್ಳಸಾಗಾಟ ಮಾಡುತ್ತಿದ್ದ 40,40,220 ರೂ. ಮೌಲ್ಯದ 24 ಕ್ಯಾರಟ್‌ನ 578 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಕಾಸರಗೋಡು ಜಿಲ್ಲೆ ಮೊಗ್ರಾಲ್‌ ಪುತ್ತೂರು ನಿವಾಸಿಯಾಗಿರುವ ಈ ಪ್ರಯಾಣಿಕ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಟಕ್ಕೆ ಯತ್ನಿಸಿದ್ದಾನೆ. ಅನುಮಾನದ ಮೇಲೆ ಆತನನ್ನು ತಪಾಸಣೆಗೆ ಒಳಪಡಿಸಿದಾಗ ಅವನ ದೇಹದಲ್ಲಿ 3 ಅಂಡಾಕಾರದ ವಸ್ತು ಪತ್ತೆಯಾಗಿದ್ದು, ಅವುಗಳಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಾಟಕ್ಕೆ ಯತ್ನಿಸಿರುವುದು ಕಂಡುಬಂದಿದೆ.

ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Latest Indian news

Popular Stories