ವಿಟ್ಲ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ: ಮೂವರ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಬ್ಯಾಂಕ್ ದರೋಡೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಗೂಡಿನ ಬಳಿಯ ಮುಹಮ್ಮದ್ ರಫೀಕ್, ಮಂಜೇಶ್ವರದ ಇಬ್ರಾಹಿಂ ಕಲಂದರ್, ಬಾಯಾರ್‌ನ ದಯಾನಂದ ಬಂಧಿತ ಆರೋಪಿಗಳು. ಘಟನೆ ಸಂಬಂಧ ಈ ಮೂವರನ್ನು ಫೆ.೨೮ರಂದು ವಶಕ್ಕೆ ಪಡೆದಿದ್ದು, ಮಾ.೧೦ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಓರ್ವ ವೆಲ್ಡರ್ ಆಗಿ ಕೆಲಸ ನಿರ್ವಹಿಸಿದ ಅನುಭವವಿದ್ದು, ಗ್ಯಾಸ್ ಕಟ್ಟರ್ ಮೂಲಕ ಲಾಕರ್ ಮುರಿದು ಕಳ್ಳತನ ನಡೆಸಿದ್ದಾರೆಂದು ತಿಳಿದು ಬಂದಿದೆ.

Latest Indian news

Popular Stories