50,000 ಗಡಿ ಮುಟ್ಟಿದ ಕ್ವಿಂಟಾಲ್‌ ಅಡಿಕೆ ಧಾರಣೆ

ದಾವಣಗೆರೆ, ಜನವರಿ, 11: ಅಡಿಕೆ ಧಾರಣೆಯು 50 ಸಾವಿರ ರೂಪಾಯಿ ಮುಟ್ಟಿದ್ದು, ರೈತರು ಖುಷಿಯಾಗಿದ್ದಾರೆ.ಕಳೆದ ವರ್ಷ ಅಡಿಕೆ ದರವು ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ದಾಟಿದ್ದು ಬಿಟ್ಟರೆ, ಮತ್ತೆ ಏರಿಕೆ ಆಗಿರಲಿಲ್ಲ.

ವರ್ಷದ ಆರಂಭದಲ್ಲಿಯೇ 50 ಸಾವಿರ ರೂಪಾಯಿ ಮುಟ್ಟಿದ್ದು, ಮತ್ತಷ್ಟು ಏರಿಕೆಯಾಗಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ. ಒಂದೇ ದಿನದಲ್ಲಿ ಅಡಿಕೆ ಧಾರಣೆಯು 500 ರೂಪಾಯಿ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ 200 ರೂಪಾಯಿಯಿಂದ 300 ರೂಪಾಯಿ ಹೆಚ್ಚಾಗುತಿತ್ತು. ಸ್ವಲ್ಪ ಕಡಿಮೆಯಾಗುತಿತ್ತು.

ಕಳೆದ 20 ದಿನಗಳಿಂದ ಅಡಿಕೆ ಧಾರಣೆಯು ಏರು ಮುಖದಲ್ಲಿಯೇ ಸಾಗುತ್ತಿದೆ. ಎಲ್ಲೆಡೆ ಅಡಿಕೆ ಕೊಯ್ಲು ಬಹುತೇಕ ಮುಗಿದಿದ್ದು, ಮಾರುಕಟ್ಟೆಯಲ್ಲಿ ಅಡಿಕೆ ಬಿಡಬೇಕು ಎಂದುಕೊಂಡಿರುವ ರೈತರಿಗೆ ಸುವರ್ಣಾವಕಾಶ. ಮತ್ತೆ ಅಡಿಕೆ ಧಾರಣೆ ಏರಿಕೆ ಆಗುತ್ತೋ ಇಲ್ಲವೋ ಕಡಿಮೆ ಆಗುತ್ತೋ ಎಂಬ ಆತಂಕವೂ ಕಾಡಲಾರಂಭಿಸಿದೆ. ಯಾಕೆಂದರೆ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಮುಟ್ಟಿದ್ದರೂ ಹಲವು ರೈತರು ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಬಿಡಲು ಹೋಗಿರಲಿಲ್ಲ.

ಮತ್ತಷ್ಟು ಏರಿಕೆಯಾಗುತ್ತದೆ ಎಂದುಕೊಂಡು ಸುಮ್ಮನಾದರು. ಆ ನಂತರ 47 ಸಾವಿರ ರೂಪಾಯಿಗೆ ಕುಸಿದಿತ್ತು. ಆ ನಂತರ 50 ಸಾವಿರ ರೂಪಾಯಿ ಗಡಿ ಮುಟ್ಟಿರಲಿಲ್ಲ

Latest Indian news

Popular Stories