ಹೆಲ್ಮೆಟ್ ನಿಂದ ಹೊಡೆದು ಗರ್ಭಿಣಿ ಪತ್ನಿಯನ್ನು ಹತ್ಯೆಗೈದಿದ್ದ ಪತಿ ಅರೆಸ್ಟ್

ದಾವಣಗೆರೆ: ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ ಮಹಾಶಯ ಪತ್ನಿಯನ್ನು ಹೆಮೆಟ್ ನಿಂದ ಹೊಡೆದು ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜ.4ರಂದು ದಾವಣಗೆರೆಯ ಚನ್ನಗಿರಿ ತಾಲೂಕಿನ ನುಗ್ಗಿಹಳ್ಳಿ ಕ್ರಾಸ್ ಬಳಿ ಮೂರು ತಿಂಗಳ ಗರ್ಭಿಣಿಯನ್ನು ಪತಿಯೇ ಕೊಲೆಗೈದು ಬಳಿಕ ಅಪಘಾತ ಎಂದು ಬಿಂಬಿಸುವ ನಾಟಕವಾಡಿದ್ದ.23 ವರ್ಷದ ಯಸೋಧಾ ಮೃತ ಮಹಿಳೆ. ಆರೋಪಿ ಪತಿ ತಿಪ್ಪೇಶ್ (28) ನನ್ನು ಪೊಲೀಸರು ಬಂಧಿಸಿದ್ದಾರೆ.

ಯಶೋಧಾ ಹಾಗೂ ತಿಪ್ಪೇಶ್ ಸಂಬಂಧಿಗಳೇ ಆಗಿದ್ದು, ಪ್ರೀತಿಸಿ ಆರುತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ತಿಪ್ಪೇಶ್ ಬಗ್ಗೆ ಯಶೋಧಾ ಮನೆಯವರಿಗೆ ಒಳ್ಳೆ ಅಭಿಪ್ರಾಯವಿರಲಿಲ್ಲ. ಹಾಗಾಗಿ ಮದುವೆಗೆ ಒಪ್ಪಿರಲಿಲ್ಲ.ಆದರೂ ಜೋಡಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ತಿಪ್ಪೇಶ್ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದ. ಅಲ್ಲದೇ ಯಶೋಧಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು.

ತವರಿಗೆ ಬಂದಿದ್ದ ಪತ್ನಿಯನ್ನು ತಿಪ್ಪೇಶ್ ವಾಪಾಸ್ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಜ.4ರಂದು ಅಪಘಾತದಲ್ಲಿ ಯಶೋಧಾ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿದ್ದ. ಮಗಳ ಮೃತದೇಹ ಕಂಡು ಅನುಮಾನಗೊಂಡ ಯಶೋಧಾ ತಂದೆ ಚಂದ್ರಪ್ಪ, ಇದು ಅಪಘಾತವಲ್ಲ, ಕೊಲೆ ಎಂದು ದೂರು ದಾಖಲಿಸಿದ್ದರು

Latest Indian news

Popular Stories