SSLC PUC Exam 2024 Time Table: ದ್ವಿತೀಯ ಪಿಯುಸಿ, ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ಪ್ರಕಟ

ಬೆಂಗಳೂರು, ಫೆಬ್ರವರಿ 20: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು (2nd PUC Exam) ಮಾರ್ಚ್​ 1 ರಿಂದ 22ರ ವರೆಗೆ ನಡೆಯಲಿವೆ. ಎಸ್ಎಸ್ಎಲ್​ಸಿ ಪರೀಕ್ಷೆಗಳು (SSLC Exam) ಮಾರ್ಚ್​​ 25 ರಿಂದ ಎಪ್ರಿಲ್​ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಕಾಸಸೌಧದಲ್ಲಿ ಪೂರ್ವಭಾವಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ವರ್ಷ 8,96,271 ಮಕ್ಕಳು ಎಸ್​ಎಸ್​ಎಲ್​ಸಿ ಪರೀಕ್ಷೆ ಪರೀಕ್ಷೆ ಬರೆಯತ್ತಿದ್ದಾರೆ. 2,741 ಪರೀಕ್ಷಾ ಕೇಂದ್ರಗಳಿವೆ. ಇನ್ನು 6,98, 624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮೂರೂ ಪರೀಕ್ಷೆಯಲ್ಲಿನ ಗರಿಷ್ಠ ಅಂಕ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ. ಹಾಗಂತ ಮೂರೂ ಪರೀಕ್ಷೆ ಬರೆಯವುದು ಕಡ್ಡಾಯವಲ್ಲ. ಯಾವ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯುತ್ತಾರೆ ಅದನ್ನು ಮಾತ್ರ ಪರಿಗಣನೆ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಹಾಗೂ ಎಸ್ ಎಸ್ಎಲ್​ಸಿ ಪರೀಕ್ಷೆ-2 ಅನ್ನು ಎಪ್ರಿಲ್ ಕೊನೆಯ ವಾರದಲ್ಲಿ ನಡೆಸುತ್ತೇವೆ ಎಂದರು.

ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಅವಕಾಶ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಸಮವಸ್ತ್ರ ನಿಯಮ ಪಾಲನೆ ಮಾಡಲಾಗುತ್ತೆ. ಅಡ್ವಕೇಟ್ ಜನರಲ್ ಅವರ ಸಲಹೆ ಪಡೆದು ಹಿಜಾಬ್ ವಿಚಾರ ನಿರ್ಧರಿಸಲಾಗುತ್ತದೆ ಎಂದರು.

2024 ಪಿಯುಸಿ ವೇಳಾಪಟ್ಟಿ​
ದಿನಾಂಕ ವಿಷಯ ಸಮಯ
01/03/2024 ಕನ್ನಡ ಬೆ.10:15 – ಮ.1:30
ಅರೇಬಿಕ್ ಬೆ.10:15 – ಮ.1:30
==== ==== ====
04/03/2024 ಗಣಿತ ಬೆ.10:15 – ಮ.1:30
ಶಿಕ್ಷಣ ಶಾಸ್ತ್ರ ಬೆ.10:15 – ಮ.1:30
=== ==== ====
05/03/2024 ರಾಜ್ಯಶಾಸ್ತ್ರ ಬೆ.10:15 – ಮ.1:30
ಸಂಖ್ಯಾಶಾಸ್ತ್ರ ಬೆ.10:15 – ಮ.1:30
===== ====== ====
06/03/2024 ಮಾಹಿತಿ ತಂತ್ರಜ್ಞಾನ ಬೆ.10:15 – ಮ.1:30
ರೀಟೈಲ್​ ಬೆ.10:15 – ಮ.1:30
ಆಟೋಮೊಬೈಲ್​ ಬೆ.10:15 – ಮ.1:30
ಹೆಲ್ತಕೇರ್​ ಬೆ.10:15 – ಮ.1:30
ಬ್ಯೂಟಿ ಆ್ಯಂಡ್​ ವೆಲ್​ನೆಸ್​ ಬೆ.10:15 – ಮ.1:30
==== ===== ====
07/03/2024 ಇತಿಹಾಸ ಬೆ.10:15 – ಮ.1:30
ಭೌತಶಾಸ್ತ್ರ ಬೆ.10:15 – ಮ.1:30
===== ====== ====
09/03/2024 ಐಚ್ಛಿಕ ಕನ್ನಡ ಬೆ.10:15 – ಮ.1:30
ಲೆಕ್ಕಶಾಸ್ತ್ರ ಬೆ.10:15 – ಮ.1:30
ಭೂಗರ್ಭಶಾಸ್ತ್ರ ಬೆ.10:15 – ಮ.1:30
ಗೃಹ ವಿಜ್ಞಾನ ಬೆ.10:15 – ಮ.1:30
==== === ====
11/03/2024 ತರ್ಕಶಾಸ್ತ್ರ ಬೆ.10:15 – ಮ.1:30
ವ್ಯವಹಾರ ಅಧ್ಯಯನ ಬೆ.10:15 – ಮ.1:30
==== ==== ===
13/03/2024 ಇಂಗ್ಲಿಷ್​ ಬೆ.10:15 – ಮ.1:30
==== ==== ====
15/03/2024 ಹಿಂದೂಸ್ತಾನಿ ಸಂಗೀತ ಬೆ.10:15 – ಮ.12:30
ಮನಃಶಾಸ್ತ್ರ ಬೆ.10:15 – ಮ.1:30
ರಾಸಾಯನಶಾಸ್ತ್ರ ಬೆ.10:15 – ಮ.1:30
ಮೂಲ ಗಣಿತ ಬೆ.10:15 – ಮ.1:30
==== ==== ===
16/03/2024 ಅರ್ಥಶಾಸ್ತ್ರ ಬೆ.10:15 – ಮ.1:30
==== ==== ====
18/03/2024 ಭೂಗೋಳಶಾಸ್ತ್ರ ಬೆ.10:15 – ಮ.1:30
ಜೀವಶಾಸ್ತ್ರ ಬೆ.10:15 – ಮ.1:30
===== ==== ====
20/03/2024 ಸಮಾಜಶಾಸ್ತ್ರ ಬೆ.10:15 – ಮ.1:30
ವಿದ್ಯುನ್ಮಾನಶಾಸ್ತ್ರ ಬೆ.10:15 – ಮ.1:30
ಗಣಗ ವಿಜ್ಞಾನ ಬೆ.10:15 – ಮ.1:30
==== ===== ====
21/03/2024 ತಮಿಳು ಬೆ.10:15 – ಮ.1:30
ತೆಲಗು ಬೆ.10:15 – ಮ.1:30
ಮಲಯಾಳಂ ಬೆ.10:15 – ಮ.1:30
ಮರಾಠಿ ಬೆ.10:15 – ಮ.1:30
ಉರ್ದು ಬೆ.10:15 – ಮ.1:30
ಸಂಸ್ಕೃತ ಬೆ.10:15 – ಮ.1:30
ಫ್ರೆಂಚ್​ ಬೆ.10:15 – ಮ.1:30
==== ==== ====
22/03/2024 ಹಿಂದಿ ಬೆ.10:15 – ಮ.1:30
ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್, ಆಯುಕ್ತೆ ಬಿಬಿ ಕಾವೇರಿ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು

Latest Indian news

Popular Stories