ಬೀದರ ನಗರಸಭೆಗೆ ಆಪ್ ಸ್ಪರ್ಧೆ

ಬೀದರ್,ಏ.೮:- ಆಮ ಆದಮಿ ಪಾರ್ಟಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಲಿದ್ದು, ಈ ಸಲದ ಚುನಾವಣೆಯಲ್ಲಿ ಶೇ. ೫೦ ರಷ್ಟು ಸ್ಥಾನ ಪಡೆಯುತ್ತೇವೆ ಎಂದು ಪಕ್ಷದ ರಾಜ್ಯ ಸಹಸಂಚಾಲಕ ವಿಜಯ ಶರ್ಮಾ ಮತ್ತು ಜಿಲ್ಲಾ ಪ್ರಮುಖ ದೀಪಕ ಮಾಲಗಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ನಗರ ಸಭೆಯ ಎಲ್ಲಾ ೩೫ ವಾರ್ಡಗಳಿಗೆ ಆಪ್ ದಿಂದ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಕಸ, ದುರಾಡಳಿತ, ಭ್ರಷ್ಟಾಚಾರದ ಸಮಸ್ಯೆಗಳಿಗೆ ಪೊರಕೆಯೇ (ಝಾಡು) ಪರಿಹಾರ ೭೬೬೯೪೦೦೪೧೦ಗೆ ಮಿಸ್ಡ್ ಕಾಲ್ ಮಾಡಿ ಆಪ್ ದೊಂದಿಗೆ ಕೈಜೋಡಿಸಿ ದೆಹಲಿಯಂತೆ ಸರಕಾರದಿಂದ ಪ್ರತಿ ಕುಟುಂಬಕ್ಕೂ ಸಿಗುತ್ತಿರುವ ಎಲ್ಲಾ ಉಚಿತ ಸೌಲಭ್ಯಗಳನ್ನು ಇಲ್ಲಿಯೂ ಕೊಡಸಲಾಗುವುದು ಎಂದು ಅವರು ಹೇಳಿದರು. ಚುನಾವಣೆಯ ಉಸ್ತುವಾರಿ ಹೊಂದಿರುವ ಜಿಲ್ಲಾಧ್ಯಕ್ಷ ದೀಪಕ ಮಾಲಗಾರ, ವಿದ್ಯಾರ್ಥಿ ಘಟಕದ ರಾಜ್ಯ ಸಹ ಸಂಯೋಜಕ ಎ. ರಜಾಕ್, ಮುನೇಶ್ವರ ಇಡ್ಡೆ ಅವರು ಗಳು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವರು.
ಧನ್ಯವಾದಗಳೊAದಗೆ,
ತಮ್ಮ ವಿಶ್ವಾಸಿ
ದೀಪಕ ಮಾಲಗಾರ
ಮೋ. 9035860811

Latest Indian news

Popular Stories