ಅಪರಾಧಿಗಳು ಉತ್ತರ ಪ್ರದೇಶವನ್ನು ತೊರೆಯುತ್ತಿದ್ದಾರೆ, ಜನರಲ್ಲ – ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಹಿಂದಿನ ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ಶೂನ್ಯ ಸಹಿಷ್ಣುತೆಯ ನೀತಿಯು ಅಪರಾಧಿಗಳು ರಾಜ್ಯದಿಂದ ಪಲಾಯನ ಮಾಡುವುದನ್ನು ಖಚಿತಪಡಿಸಿದೆ ಎಂದು ಹೇಳಿದರು. ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷ ತೊರೆದವರನ್ನು “ಅತೃಪ್ತ ಆತ್ಮಗಳು” ಎಂದು ಕರೆದ ಅವರು, ಅವರ ಬೇಡಿಕೆಗಳನ್ನು ಎಂದಿಗೂ ಈಡೇರಿಸಲಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಹಿಂದೂಸ್ತಾನ್ ಟೈಮ್ಸ್‌ನ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ರಾಜ್ಯದ ಗ್ರಹಿಕೆಯನ್ನು ಬದಲಾಯಿಸಿದೆ ಎಂದು ಹೇಳಿದರು.

ಆದಿತ್ಯನಾಥ್ ಅವರು ತಮ್ಮ ಸರ್ಕಾರದ ವಿರುದ್ಧದ ಟೀಕೆಗಳನ್ನು ತಳ್ಳಿಹಾಕಿದರು. ಪ್ರಸ್ತುತ ಆಡಳಿತವು ಜನರ ಒಳಿತಿಗಾಗಿ ತೆಗೆದುಕೊಂಡ ಕ್ರಮಗಳನ್ನು ಪಟ್ಟಿ ಮಾಡಿದರು.

“2017 ರ ಮೊದಲು, ಕೈರಾನಾದಂತಹ ಉತ್ತರ ಪ್ರದೇಶದ ಕೆಲವು ಪಾಕೆಟ್‌ಗಳ ವ್ಯಾಪಾರಿಗಳು ಮತ್ತು ಜನರು ಇತರ ಸ್ಥಳಗಳಿಗೆ ವಲಸೆ ಹೋಗಬೇಕಾಯಿತು. ಆದರೆ 2017ರ ನಂತರ ಅಪರಾಧಿಗಳು ರಾಜ್ಯವನ್ನು ತೊರೆಯುತ್ತಿದ್ದಾರೆಯೇ ಹೊರತು ಜನರಲ್ಲ. ಇದು ಮೂಲಭೂತ ವ್ಯತ್ಯಾಸವಾಗಿದೆ, ”ಎಂದು ಅವರು ಸಂದರ್ಶನದಲ್ಲಿ ಹೇಳಿದರು.

“ಮಾಫಿಯಾದ ಆಸ್ತಿಗಳು ಇಂದು ಬುಲ್ಡೋಜರ್‌ಗಳಿಂದ ಧ್ವಂಸಗೊಂಡಿವೆ. ರಾಜ್ಯದ ಮಹಿಳೆಯರಿಗೆ ಸುರಕ್ಷಿತ ವಾತಾವರಣವಿದೆ” ಎಂದು ಆದಿತ್ಯನಾಥ್ ಹೇಳಿದರು.

Latest Indian news

Popular Stories