ಬಿಜೆಪಿ ನಾಯಕರಿಂದ ಕರಾವಳಿಯ ಕಡೆಗಣನೆ: ರಘುಪತಿ ಭಟ್

ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯದ ನಾಯಕರು ಕರಾವಳಿಯ ಕಾರ್ಯಕರ್ತರನ್ನು, ಮತದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬರುತ್ತಿದ್ದಾರೆ. ತಾವು ಏನು ಮಾಡಿದರೂ ಕರಾವಳಿಯ ಬಿಜೆಪಿ ಕಾರ್ಯಕರ್ತರು, ಮತದಾರರು ತಮಗೆ ಮತಹಾಕುತ್ತಾರೆ ಎಂದು ಅಂದುಕೊಂಡಿದ್ದಾರೆ‌ ಎಂದು ಮಾಜಿ‌ಶಾಸಕ, ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್ ಆರೋಪಿಸಿದ್ದಾರೆ.

ನಗರದ ಪ್ರಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಸದ್ಯ ಬಿಜೆಪಿಯಲ್ಲಿ ಕಾಂಗ್ರೆಸ್ ನ ಗಾಡ್ ಫಾದರ್ ಸಂಸ್ಕೃತಿ ಇದೆ. ನಾಯಕರನ್ನು ಹಿಡಿದುಕೊಂಡರೆ ಟಿಕೆಟ್ ಸಿಗುತ್ತದೆ ಎಂಬ ಸಂಸ್ಕೃತಿಯಿದೆ. ನಾನು ನಾಯಕರನ್ನು ಯಾರನ್ನೂ ಹಿಡಿದುಕೊಂಡಿಲ್ಲ. ಜನರು, ಕಾರ್ಯಕರ್ತರನ್ನಷ್ಟೇ ನಂಬಿದ್ದೇನೆ ಅದೇ ಧೈರ್ಯದಲ್ಲಿ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಚುನಾವಣೆ ಎದುರಿಸುತ್ತಿದ್ದೇನೆ ಎಂದು ಹೇಳಿದರು.


ಕಳೆದ ಒಂದೂವರೆ ವರ್ಷಗಳ ಹಿಂದೆ ಪಕ್ಷ ಸೇರಿದ್ದ ಡಾ.ಧನಂಜಯ ಸರ್ಜಿಯವರಿಗೆ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದು ತನಗೆ ಬೇಸರ ತಂದಿದೆ. ಡಾ.ದಯಾನಂದ ಸರ್ಜಿಯವರು ಶಿವಮೊಗ್ಗದ ಹರ್ಷ ಕೊಲೆ, ಸಾವರ್ಕರ್ ಫೋಟೊ ವಿವಾದದ ಸಂದರ್ಭ ಕಮ್ಯುನಿಸ್ಟರು, ಪ್ರಗತಿಪರರನ್ನು ಸೇರಿಸಿ ಸಂಘಪರಿವಾರ, ಬಿಜೆಪಿಯ ವಿರುದ್ಧವೇ ಶಾಂತಿಗಾಗಿ ನಡಿಗೆ ಆಯೋಜಿಸಿದವರು. ಪಕ್ಷದಲ್ಲಿ ಹಿರಿಯರಿಗೆ ಟಿಕೆಟ್ ನೀಡುತ್ತಿದ್ದರೆ ತಾನು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರಲಿಲ್ಲ ಎಂದರು.

ನಾನು ಗೆದ್ದರೆ ಬಿಜೆಪಿ ವಿಧಾನಪರಿಷತ್ ಶಾಸಕನಾಗುತ್ತೇನೆ. ಸೋತರೆ ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ ಎಂದು ರಘುಪತಿ ಭಟ್ ಹೇಳಿದರು.

Latest Indian news

Popular Stories