ಅಮಿತ್ ಶಾ ಸ್ಪರ್ಧಿಸುವ ಗಾಂಧಿನಗರದಲ್ಲಿ ನಾಮಪತ್ರ ಹಿಂಪಡೆಯಲು ಮೂವರು ಲೋಕಸಭಾ ಅಭ್ಯರ್ಥಿಗಳಿಗೆ ಒತ್ತಡ – ಅಭ್ಯರ್ಥಿಗಳಿಂದ ಆರೋಪ

ಏಪ್ರಿಲ್ 21 ರಂದು ಭಾರತೀಯ ಜನತಾ ಪಕ್ಷವು ಸೂರತ್ ಲೋಕಸಭೆಯನ್ನು ಅವಿರೋಧವಾಗಿ ಗೆದ್ದ ನಂತರ ಇದೀಗ ಗಾಂಧಿನಗರದ ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದೆ.

39 ವರ್ಷದ ಜಿತೇಂದ್ರ ಚೌಹಾಣ್ ಅವರು ಗದ್ಗದಿತರಾಗಿ ಗುಜರಾತಿನ ಗಾಂಧಿನಗರ ಸಂಸದೀಯ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಂತೆ “ಅಮಿತ್ ಶಾ ಅವರ ಜನರು” ತಮಗೆ ಒತ್ತಡ ಹೇರಿರುವ ಕುರಿತು ಹೇಳಿದ್ದಾರೆ.

“ನಾನು ಕೊಲ್ಲಲ್ಪಡುವ ಸಾಧ್ಯತೆಯಿದೆ” ಎಂದ ಚೌಹಾಣ್, ನಾನು ನನ್ನ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ: ಈ ರಾಷ್ಟ್ರವನ್ನು ಉಳಿಸಿ; ಅದು ಅಪಾಯದಲ್ಲಿದೆ ಎಂದು ಹೇಳಿದ್ದಾರೆ.

“ನನ್ನ ಮೇಲೆ ಒತ್ತಡವಿದ್ದ ಕಾರಣ ನಾನು ಹಿಂದೆ ಸರಿದಿದ್ದೇನೆ” ಎಂದು ಚೌಹಾಣ್ ಸ್ಕ್ರಾಲ್‌ಗೆ ತಿಳಿಸಿದ್ದಾರೆ. ಇದು ಅಹಮದಾಬಾದ್‌ನ ಬಾಪುನಗರದ ಬಿಜೆಪಿ ಶಾಸಕ ದಿನೇಶ್ ಸಿಂಗ್ ಕುಶ್ವಾ ಅವರ ಕಡೆಯವರು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚೌಹಣ್ ಸೇರಿದಂತೆ ಮೂವರ ಮೇಲೆ ಒತ್ತಡ ಹೇರಲಾಗಿರುವ ಕುರಿತು ಸ್ಕ್ರಾಲ್ ವರದಿ ಮಾಡಿದೆ.

ಗಾಂಧಿನಗರ ಬಿಜೆಪಿಯ ಭದ್ರ ಕೋಟೆ. ಪಕ್ಷವು 1989 ರಿಂದ ಲೋಕಸಭೆ ಸ್ಥಾನವನ್ನು ಗೆಲ್ಲುತ್ತ ಬಂದಿದೆ. 2019 ರಲ್ಲಿ ಅಮಿತ್ ಷಾ ಅವರ ಗೆಲುವಿನ ಅಂತರವು 5.5 ಲಕ್ಷಕ್ಕೂ ಹೆಚ್ಚು ಮತಗಳಾಗಿತ್ತು.

Latest Indian news

Popular Stories