ಕೃಷಿ ಕಾಯಿದೆ ವಾಪಾಸ್: ರೈತರ ಹೋರಾಟಕ್ಕೆ ಸಂದ ಜಯ – ವೆರೋನಿಕಾ ಕರ್ನೆಲಿಯೋ

ಉಡುಪಿ: ಮೂರು ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದುಕೊಂಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರ ರೈತರು ಮಾಡಿದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಕೇಂದ್ರ ಸರಕಾರ ತಂದ ಕರಾಳ ಕೃಷಿ ಕಾಯಿದೆಗಳ ವಿರುದ್ದ ರೈತರು ಸತತ ಒಂದು ವರ್ಷದಿಂದ ಪ್ರತಿಭಟನೆ ಮಾಡುತ್ತಿದ್ದ ಅವರ ನಿರಂತರ ಹೋರಾಟಕ್ಕೆ ಮಣಿದು ಬಿಜೆಪಿ ಸರಕಾರ ಈ ನಿರ್ದಾರವನ್ನು ತೆಗೆದು ಕೊಂಡಿದೆ. ದೇಶದ ಪ್ರಧಾನಿ ಇಂದಿರಾಗಾಂಧಿಯವರು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದಿದ್ದು, ಅವರ ಜನ್ಮ ದಿನದಂದು ಬಿಜೆಪಿ ಸರಕಾರ ಕರಾಳ ಕಾಯಿದೆಯನ್ನು ವಾಪಾಸು ಪಡೆದಿರುವುದು ರೈತರ ನೈಜ ಹೋರಾಟಕ್ಕೆ ಸಂದ ಜಯವಾಗಿದೆ. ಹೋರಾಟದಲ್ಲಿ ಹಲವಾರು ರೈತರು ತಮ್ಮ ಜೀವಗಳನ್ನು ಬಲಿ ನೀಡಿದರೂ ಕೂಡ ಶಾಂತಿಯುತವಾಗಿ ಪ್ರತಿಭಟಿಸಿದ ಎಲ್ಲಾ ಅನ್ನದಾತರಿಗೆ ಅಭಿನಂದನೆಗಳು. ನರೇಂದ್ರ ಮೋದಿ ಸರಕಾರ ತನ್ನ ಹಟವನ್ನು ಬಿಟ್ಟು ರೈತರ ಹೋರಾಟಕ್ಕೆ ಮಣಿದಿದೆ.

ಇದೇ ರೀತಿ ದೇಶದಲ್ಲಿ ಇಂಧನ ಬೆಲೆ ಗಗನಕ್ಕೇರಿದ್ದು ಇದರಿಂದ ಜನತೆ ಕಷ್ಟಪಡುತ್ತಿದ್ದು ಅದರ ಬೆಲೆಯನ್ನು ಕೂಡ ಇಳಿಸಿ ಅವರಿಗೂ ಬದಕಲು ಅವಕಾಶ ಮಾಡಿಕೊಡಬೇಕು. ತಪ್ಪಿದ್ದಲ್ಲಿ ರೈತರಂತೆ ಜನರೂ ಕೂಡ ಇದೇ ರೀತಿಯ ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಬಂದಿತು ಎಂದು ಅವರು ಹೇಳಿದ್ದಾರೆ.

Latest Indian news

Popular Stories