ಚಿಕನ್ ಟಿಕ್ಕಾ ಮಸಾಲಾ ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ನಿಧನ


ನವದೆಹಲಿ: ಅತ್ಯಂತ ಜನಪ್ರಿಯ ಖಾದ್ಯ ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಖ್ಯಾತ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ ಅವರು ನಿಧನರಾಗಿದ್ದಾರೆ.

‘ಮಿಸ್ಟರ್ ಅಲಿ’ ಎಂದು ಖ್ಯಾತಿ ಪಡೆದಿದ್ದ ಅಲಿ ಅಹ್ಮದ್ ಅಸ್ಲಾಮ್ ಅವರು 77 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಐದು ಮಕ್ಕಳನ್ನು ಅಗಲಿದ್ದಾರೆ. ಡಿಸೆಂಬರ್ 22 ರಂದು ಗ್ಲ್ಯಾಸ್ಗೋ ಸೆಂಟ್ರಲ್ ಮಸೀದಿಯಲ್ಲಿ ನಡೆದ ಅವರ ಅಂತ್ಯಕ್ರಿಯೆಯನ್ನು ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು.


ಗ್ಲ್ಯಾಸ್ಗೋದ ವೆಸ್ಟ್ ಎಂಡ್‌ನಲ್ಲಿರುವ ಶಿಶ್ ಮಹಲ್ ಹೋಟೆಲ್ ಅನ್ನು ಅವರು 1964 ರಲ್ಲಿ ಚಿಕ್ಕ ಹುಡುಗನಾಗಿದ್ದಾಗ ಆರಂಭಿಸಿದ್ದರು. ಹೀಗಾಗಿ ಶಿಶ್ ಮಹಲ್ ಹೋಟೆಲ್ ಅನ್ನು ಗೌರವ ಸೂಚಕವಾಗಿ 48 ಗಂಟೆಗಳ ಕಾಲ ಬಂದ್ ಮಾಡಲಾಗಿದೆ.

 ಅಲಿ ಅಹ್ಮದ್ ಅಸ್ಲಾಮ್ ಅವರು 1970 ರ ದಶಕದಲ್ಲಿ ತಮ್ಮ ರೆಸ್ಟೋರೆಂಟ್ ಶಿಶ್ ಮಹಲ್‌ನಲ್ಲಿ ಟೊಮೆಟೊ ಸೂಪ್‌ನಿಂದ ತಯಾರಿಸಿದ ಸಾಸ್ ಅನ್ನು ಸುಧಾರಿಸುವ ಮೂಲಕ ಸಂಶೋಧಕ ಚಿಕನ್ ಟಿಕ್ಕಾ ಮಸಾಲಾ ಖಾದ್ಯವನ್ನು ಕಂಡುಹಿಡಿದರು.

ಚಿಕನ್ ಟಿಕ್ಕಾ ಮಸಾಲಾ ಬ್ರಿಟನ್ ರೆಸ್ಟೋರೆಂಟ್ ಗಳಲ್ಲಿ ಭಾರೀ ಜನಮನ್ನಣೆ ಪಡೆದಿದೆ. ಈ ಹಿಂದೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ರಾಬಿನ್ ಕುಕ್ ಚಿಕನ್ ಟಿಕ್ಕಾ ಮಸಾಲವನ್ನು “ನಿಜವಾದ ಬ್ರಿಟಿಷ್ ರಾಷ್ಟ್ರೀಯ ಭಕ್ಷ್ಯ” ಎಂದು ಘೋಷಿಸಿದ್ದರು.

Latest Indian news

Popular Stories