ಉಡುಪಿ | ಹೂಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಕೊಟ್ಟ ನೆಟ್ ವರ್ಕ್ – ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರ ಪರದಾಟ !

ಉಡುಪಿ: ಹೂಡೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಯಾವುದೇ ಕಂಪೆನಿಯ ಮೊಬೈಲ್ ನೆಟ್ ವರ್ಕ್ ಇಲ್ಲದೆ ಪರದಾಡುವಂತಾಗಿದೆ.

ಮೊಬೈಲ್ ಫೋನ್ ಸಲ್ಪ ಸಮಯ ಸ್ಥಗಿತಗೊಂಡರೆ ವ್ಯಾಪಾರ – ವ್ಯವಹಾರಗಳು, ಬ್ಯಾಂಕಿಂಗ್ ಸಂಬಂಧಿಸಿದ ಕೆಲಸಗಳು, ಅಕಸ್ಮಾತ್ ಅವಘಡಗಳ ಸಂಧರ್ಭದಲ್ಲಿ ಅಗ್ನಿಶಾಮಕದಳ ಹಾಗೂ ಇತರೆ ಸಂಪರ್ಕದ ಕೆಲಸಗಳು, ಕೌಟುಂಬಿಕ ಸಂಪರ್ಕಗಳು , ಕಛೇರಿ ಸಂಬಂಧಿತ ಕೆಲಸ , ಆರೋಗ್ಯದ ಮೇಲ್ವಿಚಾರಣೆ ಇತ್ಯಾದಿಗಳು ಅಸ್ತವ್ಯಸ್ತವಾಗಿ ಬಿಡುತ್ತದೆ ಇಂತಹ ಸಂದರ್ಭಗಳಲ್ಲಿ ಹೂಡೆಯಲ್ಲಿ ಹಲವು ತಿಂಗಳಿನಿಂದ ಈ ಸಮಸ್ಯೆ ಮುಂದುವರಿದದ್ದರು‌ ಸೂಕ್ತ ಪರಿಹಾರ ಸಾಧ್ಯವಾಗಿಲ್ಲ.

1001096189 Udupi, Civic issues, Prime news

ಈ ಮುಂಚೆಯಿದ್ದ ಟವರ್ ಸ್ಥಾಪಿತ ಜಾಗದ ಲೀಝ್ ಮುಗಿದಿದ್ದು ಈ ಕಾರಣಕ್ಕಾಗಿ ಜನರೇಟರ್ ದುರಸ್ತಿ ಕಾರ್ಯ ನಡೆದಿರಲಿಲ್ಲ. ಇದೀಗ ಸಂಪೂರ್ಣ ನೆಟ್ವರ್ಕ್ ಕಾರ್ಯ ಸ್ಥಗಿತಗೊಂಡಿದ್ದು ತೋನ್ಸೆ ಪಂಚಾಯತ್ ವ್ಯಾಪ್ತಿಯ ಹೂಡೆ, ಪೇರ್ಲಕಡಿ, ಕಂಬ್ಳತೋಟ, ಗುಜ್ಜರಬೆಟ್ಟಿನ ಉತ್ತರ ಭಾಗ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲಿ ಮೊಬೈಲ್ ಅಥವಾ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತಿರಲ್ಲಿಲ್ಲ. ಆದರೆ ಮೇ 19ರ ರವಿವಾರದ ನಂತರ ಈ ಪ್ರದೇಶಗಳಲ್ಲಿ ಮೊಬೈಲ್ ಪೋನ್ ಮತ್ತು ಇಂಟರ್ನೆಟ್ ಸಂಪರ್ಕವೇ ಕಡಿತಗೊಂಡಿದೆ. ಆದ್ದರಿಂದ ನಿತ್ಯ ಜೀವನದ ವ್ಯವಹಾರಗಳ ಮೇಲೆ ತೀರಾ ನಕಾರಾತ್ಮಕ ಪ್ರಭಾವ ಬೀರಿದೆ.

ಜನ ಸಂಪರ್ಕಕ್ಕೆ ಪರದಾಡುವ ಸ್ಥಿತಿ ಏರ್ಪಟ್ಟಿದೆ. ಸೂಕ್ತ ನಿವೇಶಮ ದೊರಕಿದಲ್ಲಿ ಟವರ್ ಸ್ಥಾಪಿಸುವ ಕುರಿತು ಸಂಸ್ಥೆಯವರು ಹೇಳುತ್ತಿದ್ದಾರೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸ್ವತಃ ಜನರೆಲ್ಲ ಸೇರಿ ಮೇ 21 ರಂದು ಸಭೆ ಸೇರಿ‌ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಿದ್ದಾರೆ ಎಂಬ ಮಾಹಿತಿ‌ ಲಭ್ಯವಾಗಿದೆ.

Latest Indian news

Popular Stories