ಮಂಗಳೂರು ಕೊಲೆ ಪ್ರಕರಣ: ಮೊಬೈಲ್ ಸುಲಿಗೆಗಾಗಿ ಹತ್ಯೆ – ನಾಲ್ವರು ವಶಕ್ಕೆ

ಮಂಗಳೂರು,ಎ.19: ಬಂಟ್ವಾಳ ತಾಲೂಕಿನ ಅಮ್ಮುಂಜೆ
ಗ್ರಾಮದ ನಿವಾಸಿ, ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಜನಾರ್ದನ ಪೂಜಾರಿ (45) ಅವರ ಕೊಲೆಗೆ ಸಂಬಂಧಿಸಿದ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಹರೆಮುರಿ ಕಟ್ಟಿದ್ದಾರೆ.

ಆರೋಪಿಗಳನ್ನು ತಿರುವನಂತಪುರದ ಪ್ರಶಾಂತ್ (40), ವಿಟ್ಲದ ಶರತ್ ವಿ. (36), ಕುಶಾಲನಗರದ ಜಿಕೆ ರವಿಕುಮಾರ್ ಯಾನೆ ನಂದೀಶ್ (38), ಕೊಣಾಜೆಯ ವಿಜಯ ಕುಟಿನ್ಹಾ (28) ಎಂದು ಗುರುತಿಸಲಾಗಿದೆ.

ಬಿಜೆಪಿಯ ಸಕ್ರಿಯ ಕಾರ್ಯಕರ್ತ, ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಜನಾರ್ದನ ಪೂಜಾರಿ ಮಂಗಳವಾರ ಸಂಜೆ 5ರ ವೇಳೆಗೆ ನೆಹರು ಮೈದಾನದ ಬಳಿ ನಿದ್ದೆ ಮಾಡುತ್ತಿದ್ದಾಗ ಆರೋಪಿಗಳು ಮೊಬೈಲ್ ಸುಲಿಗೆ ಮಾಡಲು ಯತ್ನಿಸಿದ್ದರು. ಇದಕ್ಕೆ ಜನಾರ್ದನ ಪೂಜಾರಿ ವಿರೋಧಿಸಿದಾಗ ಆರೋಪಿಗಳ ಪೈಕಿ ಒಬ್ಬಾತ ಜನಾರ್ದನ ಪೂಜಾರಿಯ ಎದೆಗೆ ಕಾಲಿನಿಂದ ಒದ್ದ ಎನ್ನಲಾಗಿದೆ.ಇದರಿಂದ ಜನಾರ್ದನ ಪೂಜಾರಿ 6 ಅಡಿ ಆಳಕ್ಕೆ ಬಿದ್ದಿದ್ದು, ಅಲ್ಲಿಗೂ ಧುಮುಕಿದ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಮೊಬೈಲ್ ಕಿತ್ತು ಪರಾರಿಯಾಗಿದ್ದರು.

ಈ ಸಂದರ್ಭ ಜನಾರ್ದನ ಪೂಜಾರಿ ಆಘಾತದಿಂದ
ಮೃತಪಟ್ಟಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

Latest Indian news

Popular Stories