ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಿದರೆ ತಪ್ಪಿಲ್ಲ – ಶಾಸಕ ರಘುಪತಿ ಭಟ್

ಉಡುಪಿ: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬೇಕೋ ಬೇಡವೋ ಎಂಬ ಚರ್ಚೆಯ ನಡುವೆ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಿದರೆ ತಪ್ಪಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಟ್ಟರೆ ತಪ್ಪು ಎಂದು ನನಗೆ ಅನಿಸುವುದಿಲ್ಲ. ಮೊಟ್ಟೆ ಕೊಟ್ಟ ಕೂಡಲೇ ಮೊಟ್ಟೆಯನ್ನು ತಿನ್ನಲೇಬೇಕು ಎಂದೇನಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಭಟ್, ಸಣ್ಣ ಪ್ರಾಯದಲ್ಲಿ ಮಕ್ಕಳು ಸಸ್ಯಾಹಾರಿಯಾಗಿದ್ದರೆ ಸಸ್ಯಾಹಾರಿಯಾಗಿಯೇ ಇರುತ್ತಾರೆ. ಬೆಳೆದು ದೊಡ್ಡವರಾದ‌ ಮೇಲೆ‌ ಅವರು ಬದಲಾಗಬಹುದು. ಮೊಟ್ಟೆಯನ್ನು ಕೊಡುವ ಸಂದರ್ಭ ಪ್ರತ್ಯೇಕವಾಗಿ ಕೊಡುವ ವ್ಯವಸ್ಥೆ ಮಾಡಬಹುದು.

ಕೆಲವೊಮ್ಮೆ ಸಸ್ಯಾಹಾರಿಗಳಿಗೆ, ಮೊಟ್ಟೆ ತಿನ್ನುವುದನ್ನು ನೋಡುವಾಗ ಬೇರೆ ತೆರನಾದ ಭಾವನೆ ಬರಬಹುದು.
ಇದಕ್ಕೆ ಶಾಲೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬಹುದು.

ಇದಕ್ಕಾಗಿ‌ ಮೊಟ್ಟೆ‌‌ ಕೊಡದೇ ಇರುವುದು ಸೂಕ್ತ ನಿರ್ಧಾರವಲ್ಲ. ಇತರ ಮಕ್ಕಳು ಮೊಟ್ಟೆ ತಿನ್ನುವುದನ್ನು ನೋಡಿ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ನನಗನ್ನಿಸುವುದಿಲ್ಲ ಎಂದು ಹೇಳಿದರು.

Latest Indian news

Popular Stories