ಅದಾನಿ ಗ್ರೂಪ್ ವಿರುದ್ಧ ಮತ್ತೆ ಭ್ರಷ್ಟಾಚಾರ ಆರೋಪ: ಬೇನಾಮಿ ಹಣದ ಹರಿವು ಹರಿದು ಬರುವ ಮೂಲಕ ನಿಯಮ ಉಲ್ಲಂಘನೆ!

ಬೆಂಗಳೂರು, ಆಗಸ್ಟ್ 31: ಬಂಡವಾಳ ಹೂಡಿಕೆ ಕುರಿತಂತೆ ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪಗಳ ಕೇಳಿ ಬರುತ್ತಿದ್ದಂತೆ ಇತ್ತ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದೆ. ಸಂಘಟಿತ ಸಂಸ್ಥೆಗಳಿಗೆ ಸಂಬಂಧಿಸಿದ ಶೆಲ್ ಕಂಪನಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಶೆಲ್ ಕಂಪನಿಗಳ ಪಾತ್ರವನ್ನು ಸರಿಯಾಗಿ ತನಿಖೆ ಮಾಡುವಲ್ಲಿ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಪಾತ್ರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದಾನಿ ಗ್ರೂಪ್‌ಗೆ ಬೇನಾಮಿ ಹಣದ ಹರಿವು ಹರಿದು ಬರುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ. ಇಂತಹ ವಿಚಾರಗಳಲ್ಲಿ ವಿದೇಶಿ ನಾಗರಿಕರ ಪಾತ್ರ ಹೇಗಿದೆ, ಇನ್ನೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಪ್ತರನ್ನು ಶ್ರೀಮಂತಗೊಳಿಸಲು ನಿಯಮಗಳು ಹೇಗಿವೆ, ಅದರ ನಿಯಮ, ಮಾನದಂಡ ಕುರಿತು ಜಯರಾಮ್ ರಮೇಶ್ ಪ್ರಸ್ತಾಪಿಸಿದರು.

ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ತನಿಖೆ ವರದಿಯಲ್ಲಿ, ಮಾರಿಷಸ್ ಮೂಲಕ ಅದಾನಿ ಗ್ರೂಪ್‌ ನ ವಿವಿಧ ಕಂಪನಿಗಳ ಷೇರುಗಳ ವಹೀವಾಟು ನಡೆಸಿರುವ ಮೂಲಕ ಅದಾನಿ ಆಪ್ತರು ಭಾರೀ ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅದಾನಿ ಆಪ್ತರು ಸಾರ್ವಜನಿಕವಾಗಿ ಕೋಟ್ಯಾಂತರ ರೂ. ಹಣ ಹೂಡಿಕೆ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ ಎಂದು ರಮೇಶ್ ಹೇಳಿದರು.

ಪ್ರಕರಣ ಕುರಿತು ಸರಿಯಾಗಿ ತನಿಖೆ ಮಾಡದಿರುವುದು ಸೆಬಿ ನಿಯಮಗಳ ಮೇಲೆ ಅನುಮಾನ ಮೂಡಲು ಕಾರಣವಾಗಿದೆ. ಹಿಂಡನ್‌ಬರ್ಗ್ ರಿಸರ್ಚ್ ತನಿಖಾ ವರದಿ ಬಿಡುಗಡೆಯಾಗಿ ಆರೇಳು ತಿಂಗಳ ನಂತರ ಪತ್ರಕರ್ತರ ಸಮೂಹಕ್ಕೆ ಸೇರಿದೆ ಎನ್ನಲಾಗುವ ವೆಬ್​ಸೈಟ್ ನಲ್ಲಿ ಒಸಿಸಿಆರ್‌ಪಿ ತನಿಖಾ ವರದಿ ಪ್ರಕಟಗೊಂಡಿದೆ.

ಆರೋಪ ನಿರಾಕರಿಸಿದ ಅದಾನಿ ಗ್ರೂಪ್

ಮಾರಿಷಸ್ ದೇಶದ ಅಪಾರದರ್ಶಕ ಫಂಡ್​ಗಳ ಮೂಲಕ ಅದಾನಿ ಗ್ರೂಪ್​ನ ಬಿಸಿನೆಸ್ ಆಪ್ತರು ಹಣ ಹೂಡಿಕೆ ಮಾಡಿದ್ದಾರೆ. ಅನಾಮಧೇಯ ಪತ್ರಕರ್ತರು ತನಿಖೆ ನಡೆಸಿ ಈ ವರದಿ ರೂಪಿಸಿದ್ದಾರೆ ಎಂದು ಹೇಲಲಾಗುತ್ತಿದೆ. ಆದರೆ ಅದಾನಿ ಗ್ರೂಪ್ ಮಾತ್ರ ಈ ಎಲ್ಲ ಆರೋಪಗಳನ್ನು ಒಪ್ಪಲು ನಿರಾಕರಿಸಿದೆ.

Latest Indian news

Popular Stories