ಉದ್ಯಮಿ ಅದಾನಿ ಅಕ್ರಮದ ಕುರಿತು ಪ್ರಧಾನಿ ಮೋದಿ ಏಕೆ ಮಾತನಾಡುತ್ತಿಲ್ಲ? ರಾಹುಲ್‌ ಗಾಂಧಿ ಪ್ರಶ್ನೆ

ನವದೆಹಲಿ, ಆಗಸ್ಟ್‌ 31: ಉದ್ಯಮಿ ಅದಾನಿ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿಯನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಾನಿ ಕಂಪನಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದರೂ, ಅದರ ತನಿಖೆಗೆ ಪ್ರಧಾನಿ ಮೋದಿ ಏಕೆ ಒಪ್ಪುತ್ತಿಲ್ಲ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪಗಳು ಕೇಳಿಬಂದಿವೆ. ಆದರೆ, ಈ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಅದಾನಿ ಸಂಸ್ಥೆಗಳಿಗೆ ಸಂಬಂಧಿಸಿದ ಶೆಲ್ ಕಂಪನಿಗಳಲ್ಲಿ ಭ್ರಷ್ಟಾಚಾರ ಬಲಗೊಳ್ಳುತ್ತಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಪ್ರಮುಖ ಜಾಗತಿಕ ಹಣಕಾಸು ಪತ್ರಿಕೆಗಳು ಅದಾನಿ ವಿಷಯದ ಬಗ್ಗೆ ಬಹಳ ಸೂಕ್ತವಾದ ಪ್ರಶ್ನೆಗಳನ್ನು ಎತ್ತಿವೆ. ಜಿ 20 ಶೃಂಗಸಭೆಯು ಹತ್ತಿರದಲ್ಲಿದೆ. ಈ ಸಂದರ್ಭದಲ್ಲಿ ಅದಾನಿ ಕಂಪನಿಗಳ ಕುರಿತು ಪ್ರಧಾನಿ ಮಾತನಾಡುವುದು ಸೂಕ್ತವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರುವ ನಾಯಕರು ಈ ವಿಶೇಷ ಕಂಪನಿ ಯಾವುದು ಎಂದು ಕೇಳುತ್ತಿದ್ದಾರೆ. ಇದು ಪ್ರಧಾನ ಮಂತ್ರಿಯ ಆಪ್ತ ವ್ಯಕ್ತಿಯ ಮಾಲೀಕತ್ವದಲ್ಲಿದೆ. ಭಾರತದಂತಹ ಆರ್ಥಿಕತೆಯಲ್ಲಿ ಈ ಸಂಭಾವಿತ ವ್ಯಕ್ತಿಗೆ ಏಕೆ ಉಚಿತವಾಗಿ ಎಲ್ಲವನ್ನೂ ನೀಡಲಾಗುತ್ತಿದೆ’ ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.

ಈ ವಿಷಯದ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸಿದ ರಾಹುಲ್‌ ಗಾಂಧಿ, ‘ಅದಾನಿ ಕಂಪನಿಗಳ ವಿಚಾರವಾಗಿ ಏನು ನಡೆಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುವುದು ಬಹಳ ಮುಖ್ಯ. ಕನಿಷ್ಠ ಜೆಪಿಸಿಗೆ ಅವಕಾಶ ನೀಡಿಬೇಕು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತನಿಖೆಗೆ ಪ್ರಧಾನಿ ಏಕೆ ಒತ್ತಾಯಿಸುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

ಜಾರ್ಜ್ ಸೊರೊಸ್ ಮತ್ತು ರಾಕ್‌ಫೆಲ್ಲರ್ ಬ್ರದರ್ಸ್ ಫಂಡ್‌ನಿಂದ ಧನಸಹಾಯ ಪಡೆದ ಅದಾನಿ ಕಂಪನಿಯು ಅಪರಾಧ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ. ಅದಾನಿ ಷೇರುಗಳಿಗೆ ಲಕ್ಷಾಂತರ ಡಾಲರ್‌ಗಳನ್ನು ಹರಿದುಬಂದಿದೆ. ಇದಕ್ಕೆ ಅಪಾರದರ್ಶಕ ಹಣವನ್ನು ಬಳಸಲಾಗಿದೆ ಎಂದು ರಾಹುಲ್‌ ಆರೋಪಿಸಿದ್ದಾರೆ.

Latest Indian news

Popular Stories