ಬಿಜೆಪಿ ಒಂದು ಕೋಮುವಾದಿ ಪಕ್ಷ: ಸ್ವಪಕ್ಷದ ವಿರುದ್ಧವೇ ಸಂಸದ ಬಚ್ಚೇಗೌಡ ವಾಗ್ದಾಳಿ

ಚಿಕ್ಕಬಳ್ಳಾಪುರ: ಬಿಜೆಪಿ ಒಂದು ಮತೀಯ ಮತ್ತು ಕೋಮುವಾದಿ ಪಕ್ಷ ಎಂದು ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಅವರು ಶುಕ್ರವಾರ ಸ್ವಪಕ್ಷದ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆಯ

ಇತ್ತೀಚಿಗಷ್ಟೇ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದ ಬಿಜೆಪಿ ಸಂಸದ ಬಚ್ಚೇಗೌಡ ಅವರು ಇಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತಾಡಿದರು.

ಈ ವೇಳೆ ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ವರದಿಗಾರರೊಂದಿಗೆ ಮಾತನಾಡಿದ ಬಚ್ಚೇಗೌಡ ಅವರು, ದೇವೇಗೌಡರು ಇರುವವರೆಗೂ ಬಿಜೆಪಿ ಜೊತೆ ಜೆಡಿಎಸ್ ಹೋಗುವುದಿಲ್ಲ ಎಂದುಕೊಂಡಿದ್ದೆ. ಜಾತ್ಯತೀತ ಎನಿಕೊಂಡಿರುವ  ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಹೋಗುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಜಾತ್ಯಾತೀತ ಅಂತ ಹೆಸರಿಟ್ಟುಕೊಂಡು ಒಂದು ಕೋಮುವಾದಿ ಪಕ್ಷದ ಜೊತೆ ಸ್ನೇಹ ಬೆಳೆಸಲು ಹೊರಟಿದ್ದಾರೆ. ಇದು ನನಗೆ ಅಚ್ಚರಿ ಮೂಡಿಸಿದೆ ಎಂದು ಬಚ್ಚೇಗೌಡ ಹೇಳಿದರು. ಸರ್ ನೀವು ಬಿಜೆಪಿ ಸಂಸದರು ಅಲ್ವಾ ಅಂತ ಕೇಳಿದಾಗ, ಹೌದು ನಿಜ, ಹಾಗಂತ ಪಕ್ಷ ಮಾಡಿದ್ದನ್ನೆಲ್ಲ ಸರಿ ಅಂತ ಹೇಳಲಾಗಲ್ಲ. ನನಗೂ ಸಾಕಷ್ಟು ಅನುಭವವಾಗಿದೆ, ಕೆಲವು ಸಲ ಸುಮ್ಮನಿರಬೇಕಾಗುತ್ತದೆ ಎಂದು ಹೇಳಿದರು.

Latest Indian news

Popular Stories