10 ರಾಜ್ಯಗಳಲ್ಲಿ “ಸೊನ್ನೆ ಸುತ್ತಿದ” ಬಿಜೆಪಿ

2024ರಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿಯಲ್ಲಿವೆ. 9 ರಾಜ್ಯಗಳಲ್ಲಿ ಎನ್‌ಡಿಎ ಒಂದೂ ಸ್ಥಾನವನ್ನೂ ಗೆಲ್ಲದೆ ಶೂನ್ಯ ಸಾಧನೆ ಮಾಡಿದ್ದರೆ, 10 ರಾಜ್ಯಗಳಲ್ಲಿ ಬಿಜೆಪಿ ಸೊನ್ನೆ ಸುತ್ತಿದೆ. ರಾಜ್ಯಗಳ ರಾಜಕಾರಣದಲ್ಲಿ ನೆಲೆ ಕಳೆದುಕೊಂಡಿದೆ. 

ಪಂಜಾಬ್‌, ಮಣಿಪುರ, ಮೇಘಾಲಯ, ಚಂಡೀಘಡ, ಲಡಾಖ್‌, ಲಕ್ಷದ್ವೀಪ, ಪುದುಚೇರಿ, ಮಿಜೋರಾಂ, ನಾಗಾಲ್ಯಾಂಡ್‌ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಪಕ್ಷ ಪಿಎಂಕೆ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಒಂದು ವೇಳೆ, ಅದೂ ಸೋತರೆ, ಬಿಜೆಪಿ ಮತ್ತು ಎನ್‌ಡಿಎ 10 ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡಲಿವೆ.

Latest Indian news

Popular Stories